ಮಾನ್ಯ ಶ್ರೀ ಡಾ. ತೇಜಲ್ ರವರು ತುಂಬಾ ಚೆನ್ನಾಗಿ ಟ್ರೀಟ್ಮೆಂಟ್ ಕೊಟ್ಟಿರುತ್ತಾರೆ . ವೈಯಕ್ತಿಕವಾಗಿ ನಾನು ಅವರ ಬಗ್ಗೆ ಹೇಳುವುದೇನೆಂದರೆ ನನ್ನ ತಾಯಿಗೂ ಡಾ಼ . ತೇಜಲ್ ಅವರೇ ಕಂಡಕ್ಟ್ ಮಾಡಿದ್ದರು . ಈಗ ನನ್ನ ಭಾವನಿಗೂ ತುಂಬಾ ಚೆನ್ನಾಗಿ ಟ್ರೀಟ್ ಮಾಡಿದ್ದಾರೆ .ಅವರಿಂದ ನನ್ನ ತಾಯಿ ಹಾಗೂ ಭಾವ ಇಬ್ಬರಿಗೂ ದೃಷ್ಟಿ ಮಾಂದ್ಯ ಸಂಪೂರ್ಣ ಕಡಿಮೆ ಆಗಿದೆ . ಅವರಿಗೆ ಒಂದು ಹೊಸ ಜೀವನವನ್ನು ಕೊಟ್ಟ ಅವರಿಗೆ ದೇವರು ಸುದೀರ್ಘ ಆಯುಷ್ಯ ಆರೋಗ್ಯ ಕೊಟ್ಟು ಇತೋಪ್ಯಧಿಕವಾದ ಜನರ ಸೇವೆ ಮಾಡುವಂತೆ ಅನುಗ್ರಹಿಸಲಿ ಎಂದು ದೇವರಲ್ಲಿ ಕೃತಜ್ಞತಾಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಈ ವಿಧವಾದ ಸಲಹೆ ಕೊಟ್ಟು ಉಚಿತವಾಗಿ ಕಣ್ಣಿನ ದೃಷ್ಟಿಮಾಂದ್ಯವನ್ನು ಪರಿಹರಿಸಲು ಸಹಾಯ ಮಾಡಿದ ಉದಯ ಭಾನು ಕಲಾಸಂಘದವರಿಗೂ ಕೃತಜ್ಞತಾಪೂರ್ವಕವಾಗಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

Google review

Book an Appointment
Call Us