ಈಗ ನಮ್ಮ ನೇತ್ರ ತಜ್ಞರು ನಿಮ್ಮ ಆನ್ಲೈನ್ ವೀಡಿಯೊ ಸಮಾಲೋಚನೆಗಾಗಿ ಲಭ್ಯವಿದ್ದಾರೆ

WhatsApp Image 2020 07 21 at 3.35.27 PM

ಈಗ ನಮ್ಮ ನೇತ್ರ ತಜ್ಞರು ನಿಮ್ಮ ಆನ್ಲೈನ್ ವೀಡಿಯೊ ಸಮಾಲೋಚನೆಗಾಗಿ ಲಭ್ಯವಿದ್ದಾರೆ

ಆತ್ಮೀಯ ಗೆಳೆಯರೇ!

ನಾರಾಯಣ ನೇತ್ರಾಲಯವು ವಿವಿಧ ವಿಶೇಷ ಸೇವೆಗಳನ್ನು ವೈಯಕ್ತಿವಾಗಿ ಒದಗಿಸುವ ಪ್ರಯತ್ನದಲ್ಲಿ ತೊಡಗಿದ್ದು, ಇದರ ಪ್ರಯುಕ್ತ ವೀಡಿಯೊ ಆಧಾರಿತ ಸಮಾಲೋಚನಾ ಸೇವೆಗಳನ್ನು ಪರಿಚಯ ಮಾಡಿ,  ತನ್ನ ಉತ್ತಮ ಗುಣಮಟ್ಟದ ರೋಗಿಗಳ ಆರೈಕೆಯನ್ನು ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಿರ್ವಹಿಸಬೇಕಾದ ಯಾವುದೇ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ರಾಜಿ ಮಾಡಿಕೊಳ್ಳದೇ ಮುಂದುವರಿಸುತ್ತಿದೆ.

ವಿಡಿಯೋ ಆಧಾರಿತ ಸಮಾಲೋಚನೆಗಾಗಿ ನೇಮಕಾತಿಯನ್ನು ಪಡೆಯುವುದು ಹೇಗೆ?

*ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರಿನ ನ ಮುಖೇನ ನಾರಾಯಣ ನೇತ್ರಾಲಯದ ಆಪ್ ಅನ್ನು ಡೌನ್ ಲೋಡ್ ಮಾಡಿರಿ.

*ಆಪ್ ಅನ್ನು ತೆಗೆದು ನಿಮ್ಮ ವಿವರಗಳನ್ನು ನಮೂದಿಸಿ ನಿಮ್ಮ ಖಾತೆಯನ್ನು ರಚಿಸಿ.

*ಚಿತ್ರಗಳನ್ನು ತೆಗೆಯುವ ಹಾಗು ವೀಡಿಯೊ ರೆಕಾರ್ಡ್ ಮಾಡಲು ಆಪ್ ಗೆ ಅಗತ್ಯವಾದ ಅನುಮತಿಯನ್ನು ನೀಡಿ.

*ನಿಮ್ಮ ತೊಂದರೆಗೆ ಸೂಕ್ತವಾದ ತಜ್ಞರನ್ನು ಆಯ್ಕೆ ಮಾಡಿದರೆ ಬಳಿಕ ವೀಡಿಯೊ ಸಮಾಲೋಚನೆ ಬಟನ್ -ನ್ನು ಕ್ಲಿಕ್ ಮಾಡಿ.

*ನೇಮಕಾತಿಗಾಗಿ ಕ್ಯಾಲೆಂಡರನ್ನು ಬಳಸಿ ನಿಮ್ಮ ಆದ್ಯತೆಯ ದಿನಾಂಕ ಮತ್ತು ಸಮಯವನ್ನು (೧೫ ನಿಮಿಷದ ಸ್ಲಾಟ್) ಆಯ್ಕೆ ಮಾಡಿ.

*ರೋಗಿಯ ಹೆಸರು ಮತ್ತು ಭೇಟಿಯ ಉದ್ದೇಶವನ್ನು ಒದಗಿಸಿದ ಬಳಿಕ ಪಾವತಿಗೆ ಮುಂದುವರಿಯಿರಿ.

*ನೇಮಕಾತಿ ವಿವರಗಳನ್ನು ಭವಿಷ್ಯದ ಉಲ್ಲೇಖಕ್ಕಾಗಿ ಬಳಕೆದಾರರ ಪ್ರೊಫೈಲ್-ನಲ್ಲಿ ಉಳಿಸಿಡಲಾಗುವುದು.

*ಮುಂಬರಲಿರುವ ನಿಮ್ಮ ವೀಡಿಯೊ ಸಮಾಲೋಚನೆಯ ಬಗ್ಗೆ ಸಂಬಂಧಪಟ್ಟ ವೈದ್ಯರಿಗೆ ತಿಳಿಸಲಾಗುವುದು.

*ವೈದ್ಯರಿಗೆ ತೋರಿಸಲು ನಿಮ್ಮ ಬಳಿ ಯಾವುದೇ ವೈದ್ಯಕೀಯ ದಾಖಲೆಗಳು ಇದ್ದಲ್ಲಿ, ಅವುಗಳನ್ನು ಈ -ಮೇಲ್ ಮುಖಾಂತರ videoconsult@narayananethralaya.com ಎಂಬ ಈ-ಮೇಲ್ ಗೆ  ಕಳುಹಿಸಿ, ಹಾಗೆಯೇ ಈ-ಮೇಲ್ ನ ಶೀರ್ಷಿಕೆಯಲ್ಲಿ ವೈದ್ಯರ ಹೆಸರು ಹಾಗು ರೋಗಿಯ ಹೆಸರನ್ನು ತಪ್ಪದೇ ಗುರುತಿಸಿ. ಮೊದಲೇ ನೀವು ಆಸ್ಪತ್ರೆಗೆ ಭೇಟಿ ನೀಡಿದವರಾಗಿದ್ದರೆ , ದಯವಿಟ್ಟು ನಿಮ್ಮ ಆಸ್ಪತ್ರೆ ID ಯನ್ನು ನಮೂದಿಸಿ.

*ನಿಮ್ಮ ನೇಮಕಾತಿ ನಿಗದಿತವಾಗಿರುವ ೧೫ ನಿಮಿಷಗಳ  ಮುಂಚಿತವಾಗಿಯೇ,ವೀಡಿಯೊ ಸಮಾಲೋಚನೆಗಾಗಿ ಸಿದ್ಧರಾಗಿರಿ.

*ನಿಮ್ಮ ನೇಮಕಾತಿಯನ್ನು ರದ್ದು ಅಥವಾ ಮುಂದೂಡುವ ಸಂದರ್ಭ  ಬಂದಲ್ಲಿ, ೨೪ ಗಂಟೆಗಳ ಮುಂಚಿತವಾಗಿಯೇ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ +91 9008094644

*ನಿಮ್ಮ ನಿಗದಿಪಡಿಸಿದ ಸಮಯದ ೨೪ ಗಂಟೆಗಳ ಒಳಗೆ ನಿಮ್ಮ ನೇಮಕಾತಿಯನ್ನು ಮುಂದೂಡಲು ಅಥವಾ ರದ್ದುಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಅಂತಹ ಸಂಧರ್ಭದಲ್ಲಿ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ವಾಸ್ತವವಾದ ಯಶಸ್ವಿ ಸಮಾಲೋಚನೆಯನ್ನು ಪಡೆಯಲು ನಿಮಗೆ ಬೇಕಾಗಿರುವುದು;

– ಒಂದು ಹೆಚ್ಚು ಪರಿಣಾಮಕಾರಿಯಾದ ವೈ ಫೈ / ದೂರವಾಣಿ ಸಿಗ್ನಲ್ ಹೊಂದಿರುವ ಚಾರ್ಜ್ ಆಗಿರುವ ಸ್ಮಾರ್ಟ್ ಫೋನ್.

-ಅಂತರ್ನಿರ್ಮಿತ ಮೈಕ್ರೊಫೋನ್ ಹೊಂದಿರುವ ಇಯರ್ ಬಡ್ಸ್ -ಗಳು.

-ಉತ್ತಮ ಬೆಳಕನ್ನು ಹೊಂದಿರುವ ಶಾಂತ ಸ್ಥಳ.

 

ಯಾವುದೇ ಸ್ಪಷ್ಟಿಕರಣಗಳಿಗಾಗಿ ನೀವು ನಮ್ಮ ತಂಡವನ್ನು ಈ ಕೆಳಗಿನ ದೂರವಾಣಿ ಸಂಖ್ಯೆಯಲ್ಲಿ ತಲುಪಬಹುದು.

080-66121641/66121643

 

ಮನೆಯಲ್ಲೇ ಇರಿ

ಸುರಕ್ಷಿತವಾಗಿರಿ

 

ಧನ್ಯವಾದಗಳು

Book an Appointment
Call Us