Refractive surgery – Kannada

ವಕ್ರೀಕಾರಕ ಶಸ್ತ್ರಚಿಕಿತ್ಸೆ (ರಿಫ್ರ್ಯಾಕ್ಟೀವ್ ಸರ್ಜರಿ)

ವಕ್ರೀಕಾರಕ ಶಸ್ತ್ರಚಿಕಿತ್ಸೆ ಹಲವಾರು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದೆ ಮತ್ತು ಕೆಲವರಲ್ಲಿರುವ ದೃಷ್ಟಿದೋಷಗಳಾದ ಸಮೀಪ ದೃಷ್ಟಿದೋಷ, ಪ್ರೆಸಬಯೊಪಿಯ, ಅಸ್ಟಿಗ್ಮ್ಯಾಟಿಸಮ್ ಮತ್ತು ದೂರದೃಷ್ಟಿ ದೋಷಗಳಿರುವವರಿಗೆ ಇದು ಸರಿಯಾದ ಶಸ್ತ್ರಚಿಕಿತ್ಸೆಯಾಗಿದೆ. ಇಂತಹ ಸಮಸ್ಯೆ ಇರುವ ಜನರು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಳಸುವುದರಿಂದ ಸ್ವಾತಂತ್ರರಾಗುತ್ತಾರೆ.

ಸರಿಯಾದ ಆಕಾರದಲ್ಲಿರುವ ಕಾರ್ನೀಯಾ ಅಥವಾ ಲೆನ್ಸ್ಗಳಿಂದಾಗಿ ಬೆಳಕಿನ ಕಿರಣಗಳು ರೆಟಿನಾದಲ್ಲಿ ಸರಿಯಾಗಿ ಕೇಂದ್ರೀಕರಿಸುವುದನ್ನು ತಡೆಯುತ್ತದೆ. ಇದು ಮಸುಕಾಗಿ ಕಾಣುವುದು ಅಥವಾ ವಿಕೃತ ದೃಷ್ಟಿಗೆ ಕಾರಣವಾಗುತ್ತದೆ. ಇದನ್ನು ವಕ್ರೀಕಾರಕ ದೃಷ್ಟಿದೋಷ ವೆಂದು ಕರೆಯಲಾಗುತ್ತದೆ. ವಕ್ರೀಕಾರಕ ಶಸ್ತ್ರಚಿಕಿತ್ಸೆಯಿಂದ ಹಲವು ರೀತಿಯ ದೃಷ್ಟಿದೋಷ ಗಳಿರುವವರ ಕಾರ್ನೀಯಾವನ್ನು ಮರುರೂಪಿಸುವಿಕೆಯ ಮೂಲಕ ಸರಿ ಮಾಡಿ ಬೆಳಕಿನ ಕಿರಣಗಳು ರೆಟಿನಾದ ಮೇಲೆ ಸರಿಯಾಗಿ ಕೇಂದ್ರೀಕರಿಸಬಹುದು. ಕೆಲವು ಕಾರ್ಯವಿಧಾನಗಳು ನಿಮ್ಮ ಕಣ್ಣಿನ ನೈಸರ್ಗಿಕ ಮಸೂರವನ್ನು ಬದಲಿಸುತ್ತದೆ.

ವಕ್ರೀಕಾರಕ ಶಸ್ತ್ರಚಿಕಿತ್ಸೆಯ ವಿಧಗಳು:

ಲಾಸಿಕ್ ಶಸ್ತ್ರಚಿಕಿತ್ಸೆ ಅಥವಾ ಇನ್-ಸಿತು ಕೆರಾಟೋಮೈಲೆಸಿಸ್  ಲೇಸರ್. ಇದು ಜನರಲ್ಲಿರುವ ದೂರ ಮತ್ತು ಸಮೀಪ ದೃಷ್ಟಿ ದೋಷಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕಾರ್ನೀಯಾವನ್ನು ಮರು ಜೋಡಿಸುವ ಕಾರ್ಯವಿಧಾನ ಮೂಲಕ ಸರಿ ಮಾಡುವುದಾಗಿದೆ.

ಪಿ. ಆರ್. ಕೆ. ಅಥವಾ ಫೋಟೋ ರಿಫ್ರ್ಯಾಕ್ಟೀವ್ ಕೇರಾ ಟೆಕ್ಟಮಿ, ಇದನ್ನು ಹೈಪರೋಪಿಯ ಮತ್ತು ಅಸ್ಟಿಗ್ಮ್ಯಾಟಿಸಮ್ ನಂತಹ ಸ್ವಲ್ಪ ಮತ್ತು ಮಾದ್ಯಮ ದೃಷ್ಟಿದೋಷಗಳನ್ನು ಸರಿಪಡಿಸಲು ಬಳಸಲಾಗುತ್ತದೆ.
ಈ ಶಸ್ತ್ರಚಿಕಿತ್ಸೆಯಲ್ಲಿ ಕಾರ್ನೀಯಾದ ಹೊರಗಿನ ಮೇಲ್ಮೈಯನ್ನು ತೆಗೆದುಹಾಕಲಾಗುತ್ತದೆ ಮತ್ತು ಎಕ್ಸಿಮರ್ ಲಾಸೆರ್‌ನಿಂದ ಕಾರ್ನೀಯಾ ದ ವಕ್ರಿಬವನದ ದೋಷವನ್ನು ಸರಿಪಡಿಸಲಾಗುತ್ತದೆ.

ಆರ್. ಎಲ್. ಇ – ರಿಫ್ರಾಕ್ಟಿವ್ ಲೆನ್ಸ್ ಎಕ್ಸ್‌ಚೇಂಜ್ ಎನ್ನುವುದು.
ಒಂದು ರೀತಿಯಾ ಶಸ್ತ್ರಚಿಕಿತ್ಸೆಯಾಗಿದ್ದ, ಲ್ಯಾಸಿಕ್ ಅಭ್ಯರ್ಥಿಗಳಲ್ಲದೆ ತೀವ್ರವಾದ ದೂರದೃಷ್ಟಿ ಅಥವಾ ಸಮೀಪ ದೃಷ್ಟಿದೋಷ ಇರುವಂತಹ ರೋಗಿಗಳಿಗೆ ಈ ಶಾಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಇದನ್ನು Prelex ಕ್ಲಿಯರ್ ಲೆನ್ಸ್ ಎಕ್ಸ್‌ಚೇಂಜ್ (CLE) ಲೆನ್ಸ್ ಹೊರತೆಗೆಯುವಿಕೆ (CLE) ಮತ್ತು ವಕ್ರೀಭವನದ ಲೆನ್ಸ್ ರೀಪ್ಲೇಸ್ಮೆಂಟ್ ಎಂದು ಕೂಡ ಕರೆಯಲಾಗುತ್ತದೆ. ತುಂಬಾ ತೆಳುವಾದ ಕಾರ್ನೀಯಾ ಇರುವವರಿಗೆ, ಶುಷ್ಕ ಕಣ್ಣುಗಳನ್ನು ಹೊಂದಿರುವವರಿಗೆ ಅಥವಾ ಸಣ್ಣ ಕಾರ್ನೀಯಾ ಸಮಸ್ಯೆಗಳಿರುವ ಜನರಿಗೆ ಈ ಶಸ್ತ್ರ ಚಿಕಿತ್ಸೆಯನ್ನು ಮಾಡಬಹುದು. ವೈದ್ಯರು ಕಾರ್ನೀಯಾ ದ ತುದಿಯಲ್ಲಿ ಸಣ್ಣದಾಗಿ ಕಟ್ ಮಾಡಿ. ನೈಸರ್ಗಿಕ ಮಸೂರವನ್ನು ತೆಗೆದು ಹಾಕಿ ಅದನ್ನು ಸಿಲಿಕೋನ್ ಪ್ಲಾಸ್ಟಿಕ್ ಇಂಟ್ರಾಕ್ಯುಲರ್ ಲೆನ್ಸ್‌ನೊಂದಿಗೆ ಬದಲಾಯಿಸಲಾಗುತ್ತದೆ.

ಲೇಸರ್ ವಕ್ರೀಕಾರಕ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಅಪಾಯಗಳು

  • ದೃಷ್ಟಿಯಲ್ಲಿ ಹೆಚ್ಚಿನ ತಿದ್ದುಪಡಿ ಮಾಡಬೇಕಾಗುತ್ತದೆ
  • ಕಡಿಮೆ ತಿದ್ದುಪಡಿ
  • ಕಣ್ಣುಗಳು ಡ್ರೈ ಆಗಿಬಿಡುತ್ತದೆ.
  • ಚುಚ್ಚು ಅಥವಾ ಪ್ರಭೆಯ ಬೆಳಕು
  • ಸೋಂಕು ತಗಲಬಹುದು
  • ಗುರುತಿನ ಚಿಹ್ನೆಗಳು ಕಾಣುತ್ತವೆ
  • ಒಮ್ಮೊಮ್ಮೆ ದೃಷ್ಟಿ ಕಡಿಮೆಯಾಗುತ್ತದೆ.

ಲೇಸರ್ ಅಲ್ಲದ ವಕ್ರೀಕಾರಕ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಅಪಾಯಗಳು

  • ಬೆಳಕನ್ನು ನೋಡಲು ಕಷ್ಟವಾಗುತ್ತದೆ
  • ಇರುಳು ಕುರುಡು ಆಗುವ ಸಂಭವವಿರುತ್ತದೆ. ರಾತ್ರಿ ನೋಡಲು ಕಷ್ಟ.
  • ಪ್ರಭೆಯ ಬೆಳಕು
  • ಶಸ್ತ್ರಚಿಕಿತ್ಸೆಯ ನಂತರ ಸ್ವಲ್ಪ ಮಟ್ಟಿಗಿನ ತಿದ್ದುಪಡಿ ದೃಷ್ಟಿಯನ್ನು ಕೆಲವೇ ತಿಂಗಳಲ್ಲಿ ಮೊದಲಿನಂತೆಯೇ ಮಾಡಬಹುದು

ವಕ್ರೀಕಾರಕ ಶಸ್ತ್ರಚಿಕಿತ್ಸೆಗೆ ಉತ್ತಮ ಅಭ್ಯರ್ಥಿ ಯಾರು?
21 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು 6 ತಿಂಗಳುಗಳವರೆಗೆ ಸ್ಥಿರವಾದ ದೃಷ್ಟಿಯ ಪ್ರಿಸ್ಕ್ರಿಪ್ಷನ್ ಹೊಂದಿರುವವರು ಸಮೀಪ ದೃಷ್ಟಿದೋಷವು 20 ಡಯಾಪ್ಟರ್ ಗಳಲ್ಲಿರುವ, ದುರದೃಷ್ಟಿದೋಷವು 4 ಡಯಾಪ್ಟರ್ಗಳಲ್ಲಿರುವ ಅಥವಾ ಅಸ್ಟಿಗ್ಮ್ಯಾಟಿಸಮ್ 5 ಡಯಾಪ್ಟರ್ಗಳಲ್ಲಿರುವವರು, ಗರ್ಭಿಣಿಯರಿಗೆ ಅಥವಾ ಹಾಲುಣಿಸುತ್ತಿರುವ ತಾಯಂದಿರಿಗೆ ಈ ಶಸ್ತ್ರಚಿಕಿತ್ಸೆ ಮಾಡುವುದಲ್ಲಿ ಮತ್ತು ಕೆರಟೊಕೊನಸ್ ಇರುವವರಿಗೆ, ಗ್ಲೋಕೋಮ ತೊಂದರೆ ಇರುವವರಿಗೆ, ಕಣ್ಣಿನ ಲೆನ್ಸ್‌ಗೆ ಹರ್ಪಿಸ್ ಸೋಂಕು ತಗಲಿದ್ದ ಇತಿಹಾಸವಿರುವವರು ಶಸ್ತ್ರಚಿಕಿತ್ಸೆಗೆ ಉತ್ತಮ ಅಭ್ಯರ್ಥಿಯಾಗಿರುವುದಿಲ್ಲ.

ವಕ್ರೀಕಾರಕ ಶಸ್ತ್ರಚಿಕಿತ್ಸೆಯಿಂದ ಯಾವ ಪಲಿತಾಂಶಗಳನ್ನು ನಿರೀಕ್ಷಿಸಬಹುದು?
ವಕ್ರೀಕಾರಕ ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿಯು ಚೆನ್ನಾಗಿ ಕಾಣುವುದರಿಂದ ರೋಗಿಗಳು ಕನ್ನಡಕದ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಳಸದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಬಹುದು. ಆದರೂ 40 ವರ್ಷ ವಯಸ್ಸಿನ ಜನರು ಈ ಶಸ್ತ್ರಚಿಕಿತ್ಸೆಯ ನಂತರವೂ ಸಹ ಓದಲು ಕನ್ನಡಕವನ್ನು ಧರಿಸಬೇಕಾಗುತ್ತದೆ. ಅತ್ಯಂತ ಸಾಮಾನ್ಯವಾದ ತೊಡಕುಗಳೆಂದರೆ ಈ ಶಸ್ತ್ರಚಿಕಿತ್ಸೆಯಲ್ಲಿ ಹೆಚ್ಚಿನ ಅಥವಾ ಕಡಿಮೆ ತಿದ್ದುಪಡಿ ಮಾಡಿದ್ದಲ್ಲಿ ಕೂಡ ಇದನ್ನು ಶಸ್ತ್ರಚಿಕಿತ್ಸೆಯಿಂದಲೇ ಸರಿಪಡಿಸಬಹುದು. ನಿಮ್ಮ ವೈದ್ಯರು ನಿಮ್ಮನ್ನು ಪರೀಕ್ಷಿಸಿದ ನಂತರ ನಿಮಗೆ ಶಸ್ತ್ರಚಿಕಿತ್ಸೆಯ ಬಗ್ಗೆ ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ತಿಳಿಯುತ್ತದೆ.

Book an Appointment
Call Us