Refractive Errors – Kannada

ವಕ್ರೀಕಾರಕ ದೋಷಗಳು:

ಸಾಮಾನ್ಯವಾಗಿ ಕಣ್ಣಿನಲ್ಲಿ ಕಾರ್ನಿಯಾ ಮತ್ತು ಲೆನ್ಸ್ ಗಳು ಮೃದು ಮತ್ತು ಬಾಗಿರುವುದು ಸಮವಾಗಿದ್ದರೆ ಬೆಳಕಿನ ಕಿರಣಗಳು ಎಲ್ಲಾ ದಿಕ್ಕುಗಳಿಂದ ರೆಟಿನಾದ ಮೇಲೆ ತೀವ್ರವಾಗಿ ಕೇಂದ್ರೀಕರಿಸುತ್ತದೆ. ಕಣ್ಣಿನ ಹಿಂಭಾಗದಲ್ಲಿ ಬೆಳಕು ಸೂಕ್ಷ್ಮಮೇಲ್ಮೈಯನ್ನು ಹೊಂದಿರುತ್ತದೆ.  ಪ್ರಕ್ರಿಯೆಯಿಂದಾಗಿ ಮೆದುಳು ಸ್ಪಷ್ಟವಾದ ಚಿತ್ರವನ್ನು ಗುರುತಿಸುತ್ತದೆ.

ನಿಯತವಲ್ಲದ ಆಕಾರದ ಕಾರ್ನಿಯಾ ಅಥವಾ ಲೆನ್ಸ್ ನಿಂದಾಗಿ ರೆಟಿನಾದಲ್ಲಿ ಬೆಳಕಿನ ಕಿರಣಗಳು ಸರಿಯಾಗಿ ಕೇಂದ್ರೀಕರಿಸುವುದನ್ನು ತಡೆಯುತ್ತದೆ. ಇದು ಮುಸುಕಾಗಿರುವ ಅಥವಾ ವಿಕೃತ ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ. ಇದನ್ನು ವಕ್ರೀಕಾರಕ ದೋಷವೆಂದು ಕರೆಯಲಾಗುತ್ತದೆ.

ವಕ್ರೀಕಾರಕ ದೋಷಗಳಿಗೆ ಮುಖ್ಯ ಕಾರಣಗಳೆಂದರೆ ದಪ್ಪ ಅಥವಾ ಸಣ್ಣ ಗಾತ್ರದ ಕಣ್ಣಿನ ಗುಡ್ಡೆಯಿರುವುದು, ಕಾರ್ನಿಯಾದ ಆಕಾರದಲ್ಲಿ ಬದಲಾವಣೆಯಾಗಿದ್ದರೆ ಅಥವಾ ವಯಸ್ಸಾಗುತ್ತಿದ್ದಂತೆ ಲೆನ್ಸ್ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದಾಗಿರುತ್ತದೆ.

ಮುಖ್ಯ ವಿಧದ ವಕ್ರೀಕಾರಕ ದೋಷಗಳೆಂದರೆ ಮಯೋಪಿಯಾ (ಸಮೀಪ ದೃಷ್ಟಿ ದೋಷ), ಹೈಪರೊಪಿಯಾ (ದೂರದೃಷ್ಟಿ ದೋಷ), ಪ್ರೆಸ್ ಬಯೋಪಿಯಾ (ವಯಸ್ಸಾಗುತ್ತಿದ್ದಂತೆ ದೃಷ್ಟಿ ನಷ್ಟವಾಗಿ ಸಮೀಪ ದೃಷ್ಟಿ ದೋಷವಾಗುತ್ತದೆ) ಮತ್ತು ಅಸ್ಟಿಗ್ಮ್ಯಾಟಿಸಮ್

ಮಯೋಪಿಯಾ ಅಥವಾ ಸಮೀಪ ದೃಷ್ಟಿಯು ಒಂದು ವಕ್ರೀಭವನದ ದೋಷವಾಗಿದ್ದು, ವಸ್ತುಗಳು ಹತ್ತಿರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಆದರೆ ವಸ್ತುಗಳು ದೂರದಲ್ಲಿ ಮುಸುಕಾಗಿರುತ್ತದೆ. ಸಮೀಪ ದೃಷ್ಟಿಯಲ್ಲಿ ದೂರದ ವಸ್ತುವಿನಿಂದ ಬೆಳಕು ರೆಟಿನಾವನ್ನು ತಲುಪುವ ಮೊದಲು ಚಿತ್ರವನ್ನು ರೂಪಿಸುತ್ತವೆ. ಕಣ್ಣಿನ ಗುಡ್ಡೆ ಅಥವಾ ಕಾರ್ನಿಯಾ ಮತ್ತು ಲೆನ್ಸ್ ಹೆಚ್ಚು ಬಾಗಿದ ಕಾರಣದಿಂದಾಗಿ ಇದು ಸಾಧ್ಯವಿರುತ್ತದೆ.

 

ಹೈಪರೋಪಿಯಾ ಅಥವಾ ದೂರದೃಷ್ಟಿ ಎಂಬುದು ದೂರದ ವಸ್ತುವನ್ನು ಸ್ಪಷ್ಟವಾಗಿ ನೋಡುತ್ತದೆ. ಇದು ಒಂದು ವಕ್ರೀಭವನದ ದೋಷವಾಗಿದೆ. ಆದರೆ ಸಮೀಪವಿರುವ ವಸ್ತುಗಳನ್ನು ನೋಡುವಾಗ ತೊಂದರೆ ಉಂಟಾದಂತೆ ತೋರುತ್ತದೆ. ಹೈಪರ್ ಮೆಟ್ರೊಪಿಯದಲ್ಲಿ ದೂರದ ವಸ್ತುವಿನಿಂದ ಬೆಳಕು ರೆಟಿನಾದ ಹಿಂದಿನ ಚಿತ್ರವನ್ನು ರೂಪಿಸುತ್ತದೆ. ಇದಕ್ಕೆ ಕಾರಣ ಸಣ್ಣ ಗಾತ್ರದ ಕಣ್ಣು ಗುಡ್ಡೆ ಅಥವಾ ಕಾರ್ನಿಯಾ ಮತ್ತು ಲೆನ್ಸ್ ಸಾಕಷ್ಟು ವಕ್ರೀಭವನದ ಬೆಳಕನ್ನು ಹೊಂದಿರುವುದಿಲ್ಲ.

 

ಪ್ರೆಸ್ ಬಯೋಪಿಯಾ ಎಂಬುದು ವಕ್ರೀಭವನದ ದೋಷವಾಗಿದ್ದು, ವಯಸ್ಸಾಗುತ್ತಿದ್ದಂತೆ ಕಣ್ಣಿನಲ್ಲಿರುವ ಲೆನ್ಸ್ನ ಸ್ಥಿತಿ ಸ್ಥಾಪಕತ್ವದ ಬದಲಾವಣೆಗಳಿಂದಾಗಿ ನಿಕಟವಾಗಿ ಕೇಂದ್ರೀಕರಿಸುವ ಸಾಮರ್ಥ್ಯ ಹೆಚ್ಚು ಕಡಿಮೆಯಾಗುತ್ತದೆ. ವಯಸ್ಸಾಗುತ್ತಿದ್ದಂತೆ ಮಸೂರವು ಗಟ್ಟಿಯಾಗುತ್ತದೆ ಮತ್ತು ವಸ್ತುಗಳನ್ನು ಸ್ಪಷ್ಟವಾಗಿ ಗಮನಹರಿಸಲು ಅವಕಾಶ ನೀಡದಂತೆ ಅಧರ ಆಕಾರವನ್ನು ಬದಲಾಯಿಸಲಾಗುವುದಿಲ್ಲ.

 

ಅಸ್ಟಿಗ್ಮ್ಯಾಟಿಸಮ್ ಎನ್ನುವುದು ರೆಟಿನಾದಮೇಲೇ ಬೆಳಕನ್ನು ಕೇಂದ್ರೀಕರಿಸದೆ ಇರುವುದಂತಹ ಒಂದು ರೀತಿಯ ವಕ್ರೀಭವನದ ದೋಷವಾಗಿದೆ. ಇದು ಚಿತ್ರಗಳನ್ನು ತೆಳುವಾಗಿ ಮತ್ತು ವಿಸ್ತರಿಸಿ ಕಾಣುವಂತೆ ಮಾಡುತ್ತದೆ. ಕಾರ್ನಿಯಾದ ಅನಿಯತವಾದ ಆಕಾರ, ಬೆಳಕು ಕಣ್ಣಿನ ಒಳಗೆ ಪ್ರವೇಶಿಸಲು ಆಗದೆ ಹಾಗಿರುವ ಕಾರ್ನಿಯಾದ ಆಕಾರ ಇವುಗಳಿಂದ ಅಸ್ಟಿಗ್ಮ್ಯಾಟಿಸಮ್ ಉಂಟಾಗಬಹುದು. ಮಯೋಪಿಯಾ ಮತ್ತು ಹೈಪರೋಪಿಯಾ ಇತರ ದೃಷ್ಟಿದೋಷಗಳ ಪರಿಸ್ಥಿತಿಗಳಲ್ಲಿ ಅಸ್ಟಿಗ್ಮ್ಯಾಟಿಸಮ್ ಕೂಡ ಸಹಭಾಗಿತ್ವ ಪಡೆಯಬಹುದು. ಇದರಿಂದ ಎಲ್ಲ ವಸ್ತುಗಳನ್ನು ದೂರದಲ್ಲಿ ತಿರುಚಿದ ಅಥವಾ ಮಸುಕಾಗಿರುವ ದೃಷ್ಟಿಗೆ ಕಾರಣವಾಗುತ್ತದೆ.

ಅನಿಸೋಮೆಟ್ರೊಪಿಯ ಎನ್ನುವುದು, ಎರಡು ಕಣ್ಣುಗಳು ಅಸಮಾನವಾದ ವಕ್ರೀಕಾರಕ ಶಕ್ತಿಯನ್ನು ಹೊಂದಿವೆ.

ವಕ್ರೀಕಾರಕ ದೋಷಗಳಿಂದ ಯಾರಿಗೆ ಅಪಾಯವಿದೆ?

ವಕ್ರೀಕಾರಕ ದೋಷಗಳು ತುಂಬಾ ಸಾಮಾನ್ಯವಾಗಿದೆ ಮತ್ತು ಮಕ್ಕಳಲ್ಲಿ ದೃಷ್ಟಿಹೀನತೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪ್ರೆಸ್ ಬಯೋಪಿಯಾ ೪೦ ವರ್ಷಕ್ಕಿಂತ ಹೆಚ್ಚಿನ ವಯಸ್ಕರ ಮೇಲೇ ಬೀರುತ್ತದೆಯಾದರು, ಇತರ ವಕ್ರೀಕಾರಕ ದೋಷಗಳು ಮಕ್ಕಳು ಮತ್ತು ವಯಸ್ಕರಿಗೆ ಪರಿಣಾಮ ಬೀರಬಹುದು. ನಿಮ್ಮ ಪೋಷಕರು ರಿಫ್ರಾಕ್ಟಿವ್ ದೋಷಗಳನ್ನು ಹೊಂದಿದ್ದಾರೆ, ನೀವು ಸಹ ಒಂದು ಅಥವಾ ಹೆಚ್ಚು ವಕ್ರೀಕಾರಕ ದೋಷದಿಂದ ಪ್ರಭಾವಿತರಾಗಬಹುದು.

ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಸಮಾನ ಪ್ರಭುತ್ವವನ್ನು ಹೆಚ್ಚಾಗಿ ಪತ್ತೆ ಹಚ್ಚಲಾಗಿದ್ದರು, ವಕ್ರೀಭವನದ ದೋಷಗಳು ಇದ್ದರೆ ಕಣ್ಣುಗಳಲ್ಲಿ ಅಥವಾ ಕಣ್ಣಿನಲ್ಲಿರುವ ದೃಷ್ಟಿಯು ಬದಲಾಯಿಸಲಾಗದಷ್ಟು ಕಡಿಮೆಯಾಗುವಿಕೆಗೆ ಕಾರಣವಾಗುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ವಕ್ರೀಕಾರಕ ದೋಷಗಳ ಚಿಹ್ನೆಗಳು ಮತ್ತು ಲಕ್ಷಣಗಳು ಕಂಡುಬರುತ್ತದೆ.

ವಕ್ರೀಕಾರಕ ದೋಷದ ಲಕ್ಷಣಗಳು ಮತ್ತು ದೋಷಗಳು

ವಕ್ರೀಕಾರಕ ದೋಷದ ಅತ್ಯಂತ ಸಾಮಾನ್ಯ ಲಕ್ಷಣವೆಂದರೆ ಮಂದ ದೃಷ್ಟಿ ರೋಗಿಗಳಿಗೆ ಧೀರ್ಘ ಕಾಲ ಓದುವುದರಿಂದ ಕಣ್ಣು ಆಯಾಸಗೊಳ್ಳುವುದು ಮತ್ತು ದೃಷ್ಟಿ ಅಸ್ಪಷ್ಟವಾಗುವುದು. ಇದರ ರೋಗ ಲಕ್ಷಣವಾಗಿರುವುದನ್ನು ವರದಿ ಮಾಡುತ್ತಾರೆ. ಡಬಲ್ ವಿಷನ್, ಅಸ್ಪಷ್ಟವಾಗುವುದು, ಪ್ರಕಾಶಮಾನವಾದ ಬೆಳಕಿನ ಪ್ರಭಾವ ಹೆಚ್ಚುವುದು, ತಲೆ ನೋವಾಗುವುದು ಮತ್ತು ಮೆಳ್ಳೆಗಣ್ಣು ಉಂಟಾಗಬಹುದು. ಮಕ್ಕಳು ಸ್ಪಷ್ಟವಾಗಿ ನೋಡಲು ಪರದೆ ಹತ್ತಿರ ಹೋಗುವುದನ್ನು ಅಥವಾ ಮಾಲಿಸಿ (ಸ್ಕ್ವಿಂಟ್) ನೋಡುವುದನ್ನು ಗುರುತಿಸಬಹುದು. ಮಕ್ಕಳಲ್ಲಿ ವಕ್ರೀಭವನದ ದೋಷಗಳಿದ್ದರೆ ಶಿಕ್ಷಕರು ಶಾಲಾ ತರಗತಿಗಳ ವ್ಯವಸ್ಥೆಯಲ್ಲಿ ದೃಷ್ಟಿ ಸಮಸ್ಯೆಗಳಿರುವುದನ್ನು ಗಮನಿಸಿ ತೋರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಕ್ಕಳಲ್ಲಿ ಸರಿಪಡಿಸಲಾಗದ ವಕ್ರೀಕಾರಕ ದೋಷಗಳಿದ್ದರೆ ಸೋಮಾರಿ ಕಣ್ಣಿಗೆ ಕಾರಣವಾಗಬಹುದು.

ಮಕ್ಕಳಲ್ಲಿ ದೃಷ್ಟಿಯ ನಷ್ಟವನ್ನು ತಪ್ಪಿಸುವ ಪ್ರಮುಖ ಮಾರ್ಗಗಳೆಂದರೆ, ವಕ್ರೀಕಾರಕ ದೋಷಗಳನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚುವುದು, ಹೆತ್ತವರು ಮತ್ತು ಪೋಷಕರಲ್ಲಿ ಮಕ್ಕಳ ವಕ್ರೀಕಾರಕ ದೋಷಗಳನ್ನು ಕುರಿತು ಸಾಕಷ್ಟು ಅರಿವು ಇದ್ದಲ್ಲಿ ಇದನ್ನು ಸಾಧಿಸಬಹುದು. ಕಾಲ ಕಾಲಕ್ಕೆ ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸುವುದು, ಅಲ್ಪ ಪ್ರಮಾಣದ ಮೆಳ್ಳೆಗಣ್ಣಿನ ಮೌಲ್ಯಮಾಪನ ಮಾಡುವುದು ಮತ್ತು ಮಕ್ಕಳಲ್ಲಿ ಹದಿಹರೆಯದವರಲ್ಲಿ ದೃಷ್ಟಿ ನಷ್ಟವನ್ನು ತಪ್ಪಿಸಲು ಪ್ಯಾಚಿಂಗ್ (ಒಂದು ಕಣ್ಣನ್ನು ಮುಚ್ಚುವುದು) ಚಿಕಿತ್ಸೆಯನ್ನು ಕ್ರಮವಾಗಿ ಅನುಸರಣೆಗೆ ಒಳಪಡಿಸುವುದು

ರೋಗ ನಿರ್ಣಯ ಮತ್ತು ಪರೀಕ್ಷೆಗಳು

ರೋಗಿಯು ತನಗಿರುವ ದೃಷ್ಟಿ ಮಸುಕಾಗಿರುವ ಮತ್ತು ದೃಷ್ಟಿ ಅಸ್ವಸ್ಥತೆಯ ಬಗ್ಗೆ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡುವ ಸಂದರ್ಭದಲ್ಲಿ ದೂರುಗಳನ್ನು ಹೇಳಿದರೆ ಆಗ ವೈದ್ಯರು ಕ್ರಮಬದ್ಧವಾದ ಕಣ್ಣಿನ ಪರೀಕ್ಷೆಗಳನ್ನು ಮಾಡುವ ಮೂಲಕ ವಕ್ರೀಕಾರಕ ದೋಷವನ್ನು ಕಂಡು ಹಿಡಿಯಬಹುದು.. ಆದರೆ ನೇತ್ರ ತಜ್ಞರು ಗರಿಷ್ಠಗೊಳಿಸುವ ಮಸೂರಗಳ ಸಂಗ್ರಹವನ್ನು ಬಳಸಿಕೊಂಡು ರೋಗಿಯ ದೃಷ್ಟಿ ಪರೀಕ್ಷಿಸುತ್ತಾರೆ.

ವಕ್ರೀಕಾರಕ ದೋಷಗಳಿಗೆ ಚಿಕಿತ್ಸೆ

ಕಣ್ಣಿಗೆ ಕನ್ನಡಕ ಅಥವಾ ಕಾಂಟಾಕ್ಟ್ ಲೆನ್ಸ್ಗಳನ್ನು ( ವಯಸ್ಕರಲ್ಲಿ ಮತ್ತು ಹಿರಿಯ ಜನರಲ್ಲಿ ) ಬಳಸುವುದರಿಂದ ವಕ್ರೀಕಾರಕ ದೋಷಗಳನ್ನು ಸರಿಪಡಿಸಬಹುದು.

ನೇತ್ರ ತಜ್ಞರನ್ನು ನಿಯತವಾಗಿ ಭೇಟಿ ಮಾಡುವುದರಿಂದ ಇವುಗಳನ್ನು ಶಿಫಾರಸ್ಸು ಮಾಡಲಾಗುತ್ತದೆ ಮತ್ತು ಸಮಗ್ರ ಮೌಲ್ಯಮಾಪನವನ್ನು ಖಾತರಿಪಡಿಸಲಾಗುತ್ತದೆ. ಲ್ಯಾಸಿಕ್ ನಂತಹ ಲೇಸರ್ ಕಣ್ಣಿನ ಶಸ್ತ್ರ ಚಿಕಿತ್ಸೆಗಳನ್ನು ಮಾಡುವ ಮೂಲಕ ಕೆಲವು ವಕ್ರೀಕಾರಕ ದೋಷಗಳನ್ನು ಹೊಂದಿರುವ ರೋಗಿಗಳು ಉತ್ತಮ ಗುಣಮಟ್ಟದ ದೃಷ್ಟಿ ಹೊಂದಿರುವುದಲ್ಲದೆ, ಉತ್ತಮ ಜೀವನಶೈಲಿಯನ್ನು ರೂಡಿಸಿಕೊಳ್ಳಬಹುದು­.

 

Book an Appointment
Call Us