Presbyopia FAQ’s in Kannada

1) ಪ್ರೆಸ್ಬ್ಯೋಪಿಯ ಎಂದರೇನು?

ಕಣ್ಣಿನ ಮಸೂರದಲ್ಲಿನ ಶಕ್ತಿ ಪ್ರಾಕೃತಿಕವಾಗಿ 40ರ ಮೇಲೆ ಕುಂಟಿತಗೊಳ್ಳುವುದಕ್ಕೆ

ಪ್ರೆಸ್‌ಬ್ಯೋಪಿಯ ಎನ್ನುತ್ತಾರೆ. ಇದು ಎಲ್ಲರಿಗೂ ವಯೋಸಹಜವಾಗಿ ಆಗುತ್ತದೆ.

 

2) ಪ್ರೆಸ್ಬ್ಯೋಪಿಯಾದ ಲಾಸಿಕ್ ಎಂದರೇನು?

ಪ್ರೆಸ್‌ಬ್ಯೋಪಿಯಾದ ಲಾಸಿಕ್ ಎಂದರೆ ಕಾರ್ನಿಯದ ಆಕಾರವನ್ನು ಬೇರೆ ಬೇರೆ ವಲಯಗಳಲ್ಲಿ ಮಾರ್ಪಡಿಸಿ, ವಿವಿಧ ದೃಷ್ಟಿವಲಯಗಳಲ್ಲಿ ನೋಡಲು ಅನುಕೂಲ ಮಾಡಿಕೊಡುವ ಅತ್ಯುನ್ನತ ಲೇಸರ್ ಶಸ್ತ್ರಚಿಕಿತ್ಸೆಯಾಗಿದೆ.

 

3) ಲಾಸಿಕ್ ಹೇಗೆ ಕೆಲಸ ಮಾಡುತ್ತದೆ?

ದೂರ, ಹತ್ತಿರ ಮತ್ತು ಮಧ್ಯದಲ್ಲಿ ನೋಡಲು ಅನುಕೂಲವಾಗುವಂತೆ ಲೇಸರ್ ಕಾರ್ನಿಯದಲ್ಲಿ ವಲಯಗಳನ್ನು ಸೃಷ್ಟಿ ಮಾಡುತ್ತದೆ. ವಿಷಯದ ವಸ್ತುವು ಇರುವ ಜಾಗಕ್ಕೆ ಅನುಗುಣವಾಗಿ ನಮ್ಮ ಮೆದುಳು, ಸ್ಪಷ್ಟವಾದ ದೃಷ್ಟಿ ಪಡೆದುಕೊಳ್ಳಲು ಹೊಂದಿಕೊಳ್ಳುತ್ತದೆ.

 

4) ಪ್ರೆಸ್ಬ್ಯೋಪಿಯಾದ ಲಾಸಿಕ್ ಅನುಕೂಲತೆಯೇನು?

ದೂರದೃಷ್ಟಿ ಮತ್ತು ಸಮೀಪದೃಷ್ಟಿ ಎರಡಕ್ಕೂ ಕನ್ನಡಕದ ಆಸರೆ ಪಡೆಯುವ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ನಾವು ಸ್ಪಷ್ಟ ದೃಷ್ಟಿ ನೀಡುವ ಗುರಿ ಹೊಂದಿರುತ್ತೇವೆ.

 

5) ವಿಧಾನದ ಮತ್ತು ಚೇತರಿಕೆಯ ಸಮಯವೆಷ್ಟು?

ಒಂದು ಕಣ್ಣಿಗೆ ಈ ವಿಧಾನ 10 ನಿಮಿಷಗಳು ತೆಗೆದುಕೊಳ್ಳುತ್ತದೆ ಮತ್ತು ನಿತ್ಯ ಚಟುವಟಿಕೆಯಲ್ಲಿ ತೊಡಗಲು ಕನಿಷ್ಟ ಒಂದು ವಾರದ ಸಮಯ ಬೇಕಾಗುತ್ತದೆ.

 

6) ಶಸ್ತ್ರಚಿಕಿತ್ಸೆಯ ನಂತರ ನಾನು ಎಷ್ಟು ಬಾರಿ ಪುನರ್ ಪರೀಕ್ಷೆಗಳಿಗೆ ಬರಬೇಕಾಗಬಹುದು?

ನೀವು ಶಸ್ತ್ರಚಿಕಿತ್ಸೆಯ ಮರುದಿನ, ಒಂದು ವಾರದ ನಂತರ, ಒಂದು ತಿಂಗಳ ನಂತರ, ಮೂರು ತಿಂಗಳ ನಂತರ ಮತ್ತು ಆರು ತಿಂಗಳ ನಂತರ ಬರಬೇಕಾಗುತ್ತದೆ. ನಿಮ್ಮ ವೈದ್ಯರು ಅಗತ್ಯವೆಂದು ಭಾವಿಸಿದ್ದಲ್ಲಿ, ನೀವು ಪುನಹ ಮಧ್ಯದಲ್ಲಿ ಬರಬೇಕಾಗಬಹುದು.

 

7) ನನಗೆ ಮತ್ತೆ ಕನ್ನಡಕ ಬರಬಹುದೇ?

ಪ್ರಾಥಮಿಕವಾಗಿ ಮಸೂರದಲ್ಲಿನ ಶಕ್ತಿ (ಪವರ್) ಸ್ವಲ್ಪ ಹೆಚ್ಚು ಅಥವಾ ಕಡಿಮೆ ಆಗಬಹುದು. ಸಣ್ಣ ಪ್ರಮಾಣದ ಕನ್ನಡಕದ ಸಂಖ್ಯೆ ಪುನಹ ಬರಬಹುದು. ಸ್ವಲ್ಪ ಮಟ್ಟಿಗೆ ನಂಜಾಗುವ ಸಾಧ್ಯತೆಯಿರುತ್ತದೆ ಮತ್ತು ಅದನ್ನು ಸೂಕ್ತ ಔಷದೋಪಚಾರಗಳಿಂದ ಸರಿಪಡಿಸಬಹುದು.

 

8) ಪ್ರೆಸ್ಬ್ಯೋಪಿಯಾದ ಪರ್ಯಾಯವೇನು?

ಯಾವುದೇ ರಿಫ್ರಾಕ್ಟೀವ್ ಶಸ್ತ್ರಚಿಕಿತ್ಸೆಯ ನಂತರ ಒಂದು ಸಣ್ಣ ಪ್ರಮಾಣದ ಕನ್ನಡಕದ ಸಂಖ್ಯೆ (ಪವರ್) ಬರುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗಿದ್ದರೂ, ನಾವು ಶಸ್ತ್ರಚಿಕಿತ್ಸೆಯ ಮುನ್ನ ಮತ್ತು ನಂತರ ಅದಕ್ಕೆ ಬೇಕಾದ ಸೂಕ್ತ ಪರೀಕ್ಷೆಗಳನ್ನು ನಡೆಸಿ ನಿಮಗೆ ಕನ್ನಡಕ ಬರದ ಹಾಗೆ ಸಾಧ್ಯವಾದಷ್ಟು ಎಚ್ಚರಿಕೆಯಿಂದ ವಿಧಾನವನ್ನು ಮುಗಿಸುತ್ತೇವೆ.

 

9) ನಾನು ಪೊರೆ ಚಿಕಿತ್ಸೆ ಅಥವಾ ಬೇರೆ ಯಾವುದಾದರೂ ಕಣ್ಣಿನ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗುತ್ತದೆಯೇ?

ನೀವು ದೂರದೃಷ್ಟಿಗೆ ಲಾಸಿಕ್ ಶಸ್ತ್ರಕ್ರಿಯೆ ಮಾಡಿಸಿಕೊಳ್ಳಬಹುದು ಮತ್ತು ಸಮೀಪ ದೃಷ್ಟಿಗೆ ಕನ್ನಡಕ ಬಳಸಬಹುದು. ಇಲ್ಲದೇ ಹೋದರೆ ಮೋನೋವಿಶನ್ ಮಾಡಿಸಿಕೊಳ್ಳಬಹುದು, ಅಂದರೆ ಒಂದು ಕಣ್ಣಿಗೆ ದೂರದೃಷ್ಟಿಯ, ಮತ್ತೊಂದು ಕಣ್ಣಿಗೆ ಸಮೀಪ ದೃಷ್ಟಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು, ಮಸೂರ ಚಿಕಿತ್ಸೆಗಳೂ ಲಭ್ಯವಿದೆ (ಮಲ್ಟೀಫೋಕಲ್ ಎಲ್ ಅಳವಡಿಸುವಿಕೆ) ಕಾರ್ನಿಯದ ಒಳಗೆ ಕಾರ್ನಿಯಲ್ ಇನ್ಲೇಸ್ ಅಳವಡಿಸುವಿಕೆ.

 

10) ಸಾಧ್ಯತೆಯಿರುವ ತೊಡಕುಗಳೇನು?

ಪೊರೆ ಎನ್ನುವುದು ವಯೋಸಹಜ ಮಸೂರದ ದುರ್ಬಲಗೊಳ್ಳುವಿಕೆ, ಇದೊಂದು ನೈಸರ್ಗಿಕ ಕ್ರಿಯೆ ಮತ್ತು ಲಾಸಿಕ್ (ಕಾರ್ನಿಯಗೆ ಸಂಭಂಡಪಟ್ಟಿದ್ದು) ಈ ಕ್ರಿಯೆಯಲ್ಲಿ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಲಾಸಿಕ್ ಕೇವಲ ಕಣ್ಣಿನ ಕನ್ನಡಕದ ಸಂಖ್ಯೆಯ ಬಗೆಗಿನ ಶಾಸ್ತ್ರಕ್ರಿಯೆಯಾಗಿರುತ್ತದೆ. ನಿಮ್ಮ ಕಣ್ಣಿನ ಪೊರೆ ಬೆಳೆದಾಗ ಅದಕ್ಕೆ ತಕ್ಕ ಮಸೂರ ಅಳವಡಿಸುವಿಕೆ ವಿಧಾನವನ್ನು (55 -65 ವಯೋಮಾನದಲ್ಲಿ) ಶಸ್ತ್ರಚಿಕಿತ್ಸೆಯ ಮೂಲಕ ಮಾಡಿಸಿಕೊಳ್ಳಬೇಕು.

Book an Appointment
Call Us