ಲಾಸಿಕ್ ಒಂದು ಸುರಕ್ಷಿತ ವಿಧಾನವೇ?

 

ಲಾಸಿಕ್ ಎಂದರೇನು?

ಲಾಸಿಕ್, ಇದು ಲೇಸರ್ ಅಸ್ಸಿಸ್ಟಡ್ ಇನ್-ಸಿಟು ಕೆರಾಟೊಮಿಲುಸಿಸ್ ಅನ್ನು ಸೂಚಿಸುತ್ತದೆ, ಇದು ಸಮೀಪ ದೃಷ್ಟಿ ದೋಷ (ಹತ್ತಿರದ ದೃಷ್ಟಿ), ಹೈಪರೋಪಿಯಾ (ದೂರದೃಷ್ಟಿ) ಮತ್ತು ಅಸ್ಟಿಗ್ಮಾಟಿಸಂ ನಂತಹ ತಿದ್ದುಪಡಿ ದೋಷಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ನಿರ್ವಹಿಸುವ ಎಕ್ಸೈಮರ್ ಲೇಸರ್ ಆಧಾರಿತ ವಿಧಾನವಾಗಿದೆ.

 

ಲಾಸಿಕ್ ಹೇಗೆ ಕೆಲಸ ಮಾಡುತ್ತದೆ?

ಲಾಸಿಕ್ ಲೇಸರ್ ವಿಧಾನವು ಕಾರ್ನಿಯಾವನ್ನು (ಕಣ್ಣಿನ ಮುಂಭಾಗದ ಮೇಲ್ಮೈ) ಮರು ರೂಪಿಸುವುದಲ್ಲದೆ ಕನ್ನಡಕ / ಕಾಂಟ್ಯಾಕ್ಟ್ ಲೆನ್ಸ್ ಗಳ ಅಗತ್ಯವಿಲ್ಲದೆ ರೆಟಿನಾದ ಮೇಲೆ ಕೇಂದ್ರೀಕರಿಸಲು ಕಣ್ಣಿಗೆ ಪ್ರವೇಶಿಸುವ ಬೆಳಕನ್ನು ಶಕ್ತಿಗೊಳಿಸಲು ಸಹಕಾರಿಯಾಗಿದೆ.

 

ನಾನು ಲಾಸಿಕ್ ಗೆ ಸೂಕ್ತ ಅಭ್ಯರ್ಥಿಯೇ ಎಂದು ಹೇಗೆ ತಿಳಿಯುವುದು?

ನೀವು ೧೮ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ನೀವು ಲಾಸಿಕ್ ಗೆ ಸೂಕ್ತ ಅಭ್ಯರ್ಥಿಯಾಗಿದ್ದು, ಮತ್ತು ೧ ವರ್ಷಗಳ ಕಾಲ ನಿಮ್ಮ ಕನ್ನಡಕದ ಪವರ್ನಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ, ಲಾಸಿಕ್ ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡುವ ಮೊದಲು, ನಿಮ್ಮ ವೈದ್ಯರು ಪೂರ್ವ ಲಾಸಿಕ್ ಮೌಲ್ಯಮಾಪನವನ್ನು ಮಾಡುತ್ತಾರೆ. (ಅದು ೨-೩ ಗಂಟೆಗಳು ತೆಗೆದುಕೊಳ್ಳಬಹುದು). ಇದರಲ್ಲಿ ಸಂಪೂರ್ಣ ಕಣ್ಣಿನ ತಪಾಸಣೆ ಇರುತ್ತದೆ, ಅದು ಸಂಪೂರ್ಣ ಕಣ್ಣಿನ ಮೇಲ್ಮೈ ಸ್ಥಿತಿ (ಶುಷ್ಕತೆಯನ್ನು ಕಂಡು ಹಿಡಿಯಲು), ದೃಷ್ಟಿ ಮತ್ತು ಕನ್ನಡಕದ ತಿದ್ದುಪಡಿ, ಐ ಒ ಪಿ, ಸ್ಕವಿಂಟ್ಗಳ ಇರುವಿಕೆಯ ಸ್ಥಿತಿ, ಆಪ್ಟಿಕ್ ನರ ಮತ್ತು ಅಕ್ಷಿಪಟಲದ ಸ್ಥಿತಿ.

 

ಬಹುಮುಖ್ಯವಾಗಿ, ನಿಮ್ಮ ವೈದ್ಯರು ಕಾರ್ನಿಯಲ್ ಟೋಪೋ ಟೋಪೋಗ್ರಾಫಿಯನ್ನು (ಕಾರ್ನಿಯಾದ ಮೇಲ್ಮೈ ಪರೀಕ್ಷೆ) ನಡೆಸುತ್ತಾರೆ, ಅದು ನೀವು ಸೂಕ್ತ ಅಭ್ಯರ್ಥಿಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಲಾಸಿಕ್ ಗೆ ಮೊದಲು ಕಡ್ಡಾಯವಾಗಿ ಅವಶ್ಯಕವಾಗಿದೆ. ಕಾರ್ನಿಯಲ್ ಟೋಪೋಗ್ರಫಿ ನಿಮ್ಮ ಕಾರ್ನಿಯಾದ ಆಕಾರ, ವಕ್ರತೆ ಮತ್ತು ದಪ್ಪದ ಬಗ್ಗೆ ವೈದ್ಯರಿಗೆ ಒಂದು ಅಂದಾಜನ್ನು ನೀಡುತ್ತದೆ.

ನಿಮ್ಮ ಕಾರ್ನಿಯಾದ ಹೆಚ್ಚಿನ ಮಾಪನ – ವೇವ್ ಫ್ರಂಟ್ ವಿಶ್ಲೇಷಣೆ (ಇದು ಕಣ್ಣಿನ ವ್ಯತ್ಯಾಸವನ್ನು  ಮೌಲ್ಯಮಾಪನ ಮಾಡುತ್ತದೆ) ಸಹ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಉತ್ತಮ ದೃಶ್ಯ ಫಲಿತಾಂಶವನ್ನು ಸಾಧಿಸಲು ಲಾಸಿಕ್ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕಣ್ಣಿಗೆ ಉತ್ತಮ ರೀತಿಯ ಸಂಭವನೀಯ ಚಿಕಿತ್ಸೆ ನೀಡಬಹುದು.

 

ಕಾಂಟ್ಯಾಕ್ಟ್ ಲೆನ್ಸ್ ಬಳಕೆದಾರರಲ್ಲಿ ಯಾವುದಾದರೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೇ?

ಕಾಂಟ್ಯಾಕ್ಟ್ ಲೆನ್ಸ್ ಬಳಕೆಯು ನಿಮ್ಮ ಕಾರ್ನಿಯಾದ ನೈಸರ್ಗಿಕ ಆಕಾರವನ್ನು ಬದಲಾಯಿಸಬಹುದು. ಇದನ್ನು “ಕಾಂಟ್ಯಾಕ್ಟ್ ಲೆನ್ಸ್ ವಾರ್ ಪೇಜ್” ಎಂದು ಕರೆಯಲಾಗುತ್ತದೆ ಮತ್ತು ಇದು ಲೇಸರ್ ದೃಷ್ಟಿ ತಿದ್ದುಪಡಿಯ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಪೂರ್ವ – ಲಾಸಿಕ್ ಕಣ್ಣಿನ ತಪಾಸಣೆಗೆ ಮೊದಲು ಕಾಂಟ್ಯಾಕ್ಟ್ ಲೆನ್ಸ್ಗಳ ಬಳಕೆಯನ್ನು ನಿಲ್ಲಿಸುವುದು ಅತ್ಯಗತ್ಯ.

 

ನೀವು ಸಾಫ್ಟ್ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದರೆ – ಕಣ್ಣಿನ ಪರೀಕ್ಷೆಗೆ ೧ ವಾರ ಮೊದಲು ಲೆನ್ಸ್ ಧರಿಸುವುದನ್ನು ನಿಲ್ಲಿಸಿ.

 

ನೀವು ಘನ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಿದ್ದರೆ – ಕಣ್ಣಿನ ಪರೀಕ್ಷೆಗೆ ೨-೩ ವಾರಗಳ ಮೊದಲು ಅವುಗಳನ್ನು ಧರಿಸುವುದನ್ನು ನಿಲ್ಲಿಸಿ.

 

ಲಾಸಿಕ್ ಗೆ ಯಾವುದಾದರೂ ವಿರೋಧಾಬಾಸಗಳಿವೆಯೇ / ತೊಡಕುಗಳಿವೆಯೇ?

ಲಾಸಿಕ್ ಎಂತವರಿಗೆ ಉತ್ತಮ ಆಯ್ಕೆಯಾಗಿಲ್ಲ:

* ಕೆರಾಟೋಕೋನಸ್, ಅಸಹಜ ಕಾರ್ನಿಯಾ ಅಂಗರಚನೆ ಮತ್ತು ಕಣ್ಣೀರಿನ ಕೊರತೆ ಇರುವ ಜನರು

* ಕೆಲವು ಜನರಲ್ಲಿ ಆರೋಗ್ಯದ ತೊಂದರೆಗಳಾದ ಅನಿಯಂತ್ರಿತ ಮಧುಮೇಹ, ರುಮಟಾಯ್ಡ್ ಸಂಧಿವಾತ, ಆಟೋಇಮ್ಮ್ಯೂನ್ ಅಥವಾ ಕೊಲ್ಲಾಜೆನ್ ನಾಳೀಯ ಕಾಯಿಲೆಗಳು ಇರುವವರು.

* ಲಾಸಿಕ್ ನಂತರ ಗುಣಪಡಿಸುವ ಪ್ರಕ್ರಿಯೆಯಲ್ಲಿ ಔಷಧಿಗಳು ಮತ್ತು ಅಂತಹ ಔಷಧಿಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿರುವ ಜನರು.

* ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಅವರ ಹಾರ್ಮೋನ್ ಗಳ  ಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುವವರೆಗೆ ತಡೆಗಟ್ಟಬೇಕು.

 

ಲಾಸಿಕ್ ಶಸ್ತ್ರ ಚಿಕಿತ್ಸೆಯ ಕಾಲಾವಧಿ ಎಷ್ಟು?

ಲಾಸಿಕ್ ಶಸ್ತ್ರ ಚಿಕಿತ್ಸೆ ಸರಳ, ನೋವು ರಹಿತ ವಿಧಾನವಾಗಿದೆ ಮತ್ತು ಎರಡು ಕಣ್ಣುಗಳಿಗೆ ಚಿಕಿತ್ಸೆ ನೀಡಲು ಕೇವಲ ೧೫-೨೦ ನಿಮಿಷಗಳು ಬೇಕಾಗುತ್ತದೆ. ಯಶಸ್ವಿ ದೃಶ್ಯ ಫಲಿತಾಂಶಗಳನ್ನು ತಕ್ಷಣವೇ ಗುರುತಿಸಲಾಗುತ್ತದೆ ಮತ್ತು ದೃಷ್ಟಿ ಸುಧಾರಣೆಯನ್ನು ಒಂದು ದಿನಕ್ಕಿಂತ ಕಡಿಮೆ ಸಮಯದಲ್ಲಿ ಕಾಣಬಹುದು.

 

Book an Appointment
Call Us