ಮಕ್ಕಳಲ್ಲಿ ಕಾಣಿಸಿಕೊಳ್ಳುವ ತಲೆನೋವು ಆತಂಕಕ್ಕೆ ಕಾರಣವಾಗಬಹುದು!
ನಿಮ್ಮ ಮಗು, ” ಅಮ್ಮ! ನಾನು ಇಂದು ಶಾಲೆಗೆ ಹೋಗುವುದಿಲ್ಲ, ನನ್ನ ತಲೆ ನೋಯಿತಾ ಇದೆ” ಅಂತ ಹೇಳುತ್ತಿದೆಯೇ?
ದಿನದ ಅಂತ್ಯದ ವೇಳೆಗೆ ನಿಮ್ಮ ಮಗು ತುಂಬಾ ಹಠ ಮಾಡುತ್ತದೆಯೇ ?
ನಿಮ್ಮ ಮಗುವಿಗೆ ರಾತ್ರಿಯಲ್ಲಿ ನಿದ್ರಿಸಲು ಕಷ್ಟವಾಗುತ್ತಿದೆಯೇ?
ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ, ಇದನ್ನು ಕೂಡಲೇ ಗಮನಿಸಿ! ಇದು ನಿಮ್ಮ ಮಗು ತಲೆ ನೋವಿನಿಂದ ನರಳುತ್ತಿರುವುದರ ಸೂಚನೆಯಾಗಿರಬಹುದು.
ಮಕ್ಕಳಲ್ಲಿ ತಲೆ ನೋವು ಬಹಳ ಸಾಮಾನ್ಯವಾದ ತೊಂದರೆಯಾಗಿದೆ ಮತ್ತು ಶಾಲೆಯಿಂದ ಆಗಾಗ್ಗೆ ಹಾಜರಾಗದೆ ತಪ್ಪಿಸಿಕೊಳ್ಳಲು, ಇದೂ ಒಂದು ಕಾರಣವಾಗಿದೆ. ಕೆಲವೊಮ್ಮೆ, ಈ ಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಹಾಗಾಗಿ ತಲೆ ನೋವು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದರಿಂದಷ್ಟೇ ಸರಿ ಹೋಗಬಹುದು. ಕೆಲವೊಮ್ಮೆ, ತಲೆನೋವು ಒಂದು ಸಮಸ್ಯೆ ಅಷ್ಟೇ ಅಲ್ಲದೆ ಅದು ಪೋಷಕರ ಆತಂಕಕ್ಕೆ ಕಾರಣವಾಗುತ್ತದೆ; ವಿಶೇಷವಾಗಿ ನಿಮ್ಮ ಮಗು ಮಧ್ಯ ರಾತ್ರಿಯಲ್ಲಿ ನಿದ್ರೆಯಿಂದ ಎಚ್ಚರಗೊಳ್ಳುವಂತಹ ಸಂಧರ್ಭಗಳಲ್ಲಿ. ತಲೆನೋವು ಮಗುವಿನ ಮಾನಸಿಕ ಕಾರ್ಯಚಟುವಟಿಕೆಯ ದುರ್ಬಲತೆಗೆ ಕಾರಣವಾಗಬಹುದು. ಅವರ ಕುಟುಂಬ ಸದಸ್ಯರಲ್ಲೂ ಕೂಡ ಈ ತೊಂದರೆ ಕಾಣಿಸಿಕೊಳ್ಳಬಹುದು. ಆದ್ದರಿಂದ ಇದನ್ನು ಸರಿಯಾದ ಸಮಯದಲ್ಲಿ ಪರಿಹರಿಸುವುದು ಬಹಳ ಮುಖ್ಯ.
ತಲೆನೋವಿನ ಸಂಭವನೀಯ ಕಾರಣಗಳು:
ದೃಷ್ಟಿ ಸಮಸ್ಯೆಗಳು:
ಸರಿಪಡಿಸಲಾಗದ ಕನ್ನಡಕದ ಪವರ್- ನಿಂದಾಗಿ ನಿಮ್ಮ ಮಗುವಿಗೆ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡುವುದರಲ್ಲಿ ತೊಂದರೆ ಉಂಟಾಗಬಹುದು. ಇದ್ದರಿಂದಾಗಿ ನಿಮ್ಮ ಮಗು ವಸ್ತುಗಳನ್ನು ತೀರಾ ಕಣ್ಣುಗಳಿಗೆ ಹತ್ತಿರವಿಟ್ಟುಕೊಂಡು ನೋಡಬಹುದು ಅಥವಾ ಮೆಳ್ಳೆಗಣ್ಣಿನ ಸಾಧ್ಯತೆಗಳೂ ಇವೆ. ಬೈನಾಕ್ಯುಲರ್ ದೃಷ್ಟಿ ಸಮಸ್ಯೆ ಕೂಡ ಆಗಬಹುದು.
ಕಣ್ಣಿನ ಸುಸ್ತು:
ಡಿಜಿಟಲ್ ಪರದೆಗಳಾದ ಕಂಪ್ಯೂಟರ್ ಗಳು, ಟ್ಯಾಬ್ಲೆಟ್ ಗಳು, ಐ-ಪ್ಯಾಡ್ ಗಳು, ಮೊಬೈಲ್ ಫೋನ್ ಗಳು ಮತ್ತು ವಿಡಿಯೋ ಗೇಮ್ ಗಳಂತಹ ಸಾಧನಗಳ ಅತಿಯಾದ ಬಳಕೆಯಿಂದ.
ಅನಾರೋಗ್ಯ: ಜ್ವರ, ಗಂಟಲು ನೋವು ಅಥವಾ ಮತ್ತೆ ಪುನರಪಿಸುವ ನೆಗಡಿ ಅಥವಾ ಶೀತದ ತೊಂದರೆ.
ಒತ್ತಡ: ಪರೀಕ್ಷೆಯ ಸಂದರ್ಭದ ಒತ್ತಡಗಳು.
ಜೀವನಶೈಲಿಗೆ ಸರಿಹೊಂದದ ಅಭ್ಯಾಸಗಳು: ಅಸಮರ್ಪಕ ನಿದ್ರೆ, ಕಡಿಮೆ ದ್ರವಗಳ ಸೇವನೆ ಅಥವಾ ಪೋಷಣೆ.
ನರವೈಜ್ಞಾನಿಕ ಕಾರಣಗಳು: ತೀವ್ರ ತಲೆನೋವು, ವಾಂತಿ ಅಥವಾ ದೃಷ್ಟಿ ನಷ್ಟಕ್ಕೆ ಸಂಬಂಧಿಸಿದ ಗಂಭೀರ ನರವೈಜ್ಞಾನಿಕ ಸಮಸ್ಯೆಗಳು.
ಈ ಸಮಸ್ಯೆಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.
ಕೌಟುಂಬಿಕ ಇತಿಹಾಸ: ತಲೆ ನೋವಿಗೆ ತುತ್ತಾಗಿರುವ ಪೋಷಕರ ಮಗುವಿಗೆ ತಲೆನೋವು ಬರುವ ಸಾಧ್ಯತೆ ಹೆಚ್ಚು.
ಕೆಲವು ಇತರ ರೋಗ ಲಕ್ಷಣಗಳೊಂದಿಗೆ ಸಂಯೋಜಿತವಾಗಿ ಕಂಡು ಬರುವ ತಲೆ ನೋವು ಗಂಭೀರ ಸಮಸ್ಯೆಯ
ಸಂಕೇತವಾಗಬಹುದು ಮತ್ತು ಇದನ್ನು ತನಿಖೆ ಮಾಡಬೇಕಾದ ಅಗತ್ಯವಿರುತ್ತದೆ. ನಿಮ್ಮ ಮಗುವಿಗೆ ತಲೆನೋವಿನ ಜೊತೆಗೆ ಈ ಯಾವುದೇ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.
* ದೃಷ್ಟಿ ಕಳೆದುಕೊಳ್ಳುವಿಕೆ.
* ವಾಂತಿ.
* ಸ್ನಾಯು ದೌರ್ಬಲ್ಯ.
* ತಲೆ ನೋವು ಕಾರಣದಿಂದ ಬೆಳಗ್ಗೆ ಅಥವಾ ಮಧ್ಯರಾತ್ರಿಯಲ್ಲಿ ಎಚ್ಚರಗೊಳ್ಳುವಿಕೆ.
ಒಬ್ಬ ಪೋಷಕರಾಗಿ, ನಿಮ್ಮ ಮಗುವಿನ ತಲೆನೋವು ಸಮಸ್ಯೆಯನ್ನು ನೀವು ಹೇಗೆ ಎದುರಿಸಬಹುದು.
* ನಿಮ್ಮ ಮಗುವಿನ ತಲೆನೋವಿನ ದೂರುಗಳನ್ನು ನಿರ್ಲಕ್ಷಿಸಬೇಡಿ.
* ತರಬೇತಿ ಪಡೆದ ಮಕ್ಕಳ ನೇತ್ರ ಶಾಸ್ತ್ರಜ್ಞರ ವಿವರವಾದ ಕಣ್ಣಿನ ಮೌಲ್ಯ ಮಾಪನವು ಯಾವುದೇ ವಕ್ರೀಕಾರಕ ದೋಷ ಅಥವಾ ಬೈನಾಕ್ಯುಲರ್ ದೃಷ್ಟಿ ವೈಪರೀತ್ಯಗಳನ್ನು ತಳ್ಳಿ ಹಾಕಲು ಸಹಾಯ ಮಾಡುತ್ತದೆ. ಯಾವುದೇ ದೃಷ್ಟಿ ಸಮಸ್ಯೆಗಳಿ ಗೆ ಚಿಕಿತ್ಸೆ ನೀಡಲು ಕನ್ನಡ ಕ ಅಥವಾ ದೃಷ್ಟಿ ಚಿಕಿತ್ಸೆ (ಥೆರಪಿ) ಯನ್ನು ಶಿಫಾರಸು ಮಾಡಬಹುದು.
* ಡಿಜಿಟಲ್ ಸಾಧನಗಳ ಬಳಕೆಯನ್ನು ಮಿತಿಗೊಳಿಸಿ ಮತ್ತು ನಿಮ್ಮ ಮಗು ೨೦ – ೨೦ – ೨೦ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ.
ಪ್ರತಿ ೨೦ ನಿಮಿಷಗಳಿಗೊಮ್ಮೆ, ೨೦ ಅಡಿ ದೂರದಲ್ಲಿರುವ ವಸ್ತುವನ್ನು ೨೦ ಸೆಕೆಂಡುಗಳವರೆಗೆ ನೋಡಬೇಕೆಂದು ಸಾರುವ ನಿಯಮ).
* ಆರೋಗ್ಯಕರ ಅಭ್ಯಾಸಗಳು: ನಿಮ್ಮ ಮಗುವಿಗೆ ಉತ್ತಮ ನಿದ್ರೆ ಪಡೆಯಲು, ಆರೋಗ್ಯಕರ ಆಹಾರವನ್ನು ಸೇವಿಸಲು, ಸಾಕಷ್ಟು ನೀರು ಕುಡಿಯಲು ಮತ್ತು ದೈಹಿಕವಾಗಿ ಸಕ್ರಿಯವಾಗಿರಲು ಪ್ರೋತ್ಸಾಹಿಸಿ.
* ಜೀವನ ಶೈಲಿಯ ಮಾರ್ಪಾಡುಗಳು: ಧೀರ್ಘವಾದ ಉಸಿರಾಟ, ಯೋಗ ಮತ್ತು ಧ್ಯಾನದಂತಹ ವಿಶ್ರಾಂತಿ ವಿಧಾನಗಳು,
ನಿಮ್ಮ ಕುತ್ತಿಗೆ ಮತ್ತು ಕಣ್ಣಿನ ಸ್ನಾಯುಗಳಲ್ಲಿನ ಒತ್ತಡದಿಂದ ಬಿಡುಗಡೆ ಪಡೆಯಲು ಸಹಾಯ ಮಾಡುತ್ತದೆ.
* ಸ್ವಭಾವ ಬದಲಾವಣೆಯ ಮೂಲಕ ಚಿಕಿತ್ಸೆ: ಸಲಹೆಗಾರರೊಂದಿಗೆ ಒತ್ತಡವನ್ನು ನಿರ್ವಹಿಸುವುದು ಮತ್ತು ಜೀವನ ಘಟನೆಗಳನ್ನುನಿಭಾಯಿಸುವುದು.
* ಮಕ್ಕಳ ವೈದ್ಯ ಅಥವಾ ನರ ವೈದ್ಯರನ್ನು ಸಂಪರ್ಕಿಸಿ: ಉಲ್ಬಣಗೊಂಡ ತಲೆನೋವು ಪದೇ ಪದೇ ಕಾಣಿಸಿಕೊಂಡರೆ, ಮೆದುಳಿನಲ್ಲಿನ ಯಾವುದೇ ಸಮಸ್ಯೆಗಳನ್ನು ಪತ್ತೆಮಾಡುವುದರ ಸಲುವಾಗಿ ವೈದ್ಯರು ಔಷಧಿ ಅಥವಾ ಇತರ ತನಿಖೆಗಳನ್ನು ಶಿಫಾರಸು ಮಾಡಬಹುದು.