Glaucoma Awareness – Kannada

 

ಗ್ಲುಕೋಮಾ ಬಗ್ಗೆ ಜಾಗೃತಿ

ಕಣ್ಣು ಗುಡ್ಡೆಯ ಸುತ್ತಲೂ ನೋವು ಮತ್ತು ಒತ್ತಡದಿಂದ ನಿಮ್ಮ ತಲೆಯಲ್ಲಿ ನೋವು ಇದೆಯೇ?

ಇದು ಗ್ಲುಕೋಮಾದ ಕಾರಣದಿಂದಾಗಿರಬಹುದು.

ಹಾಗಾದರೆ ಗ್ಲುಕೋಮಾ ಎಂದರೇನು?

ಗ್ಲುಕೋಮಾ ಎಂಬುದು ಕಣ್ಣಿನೊಳಗೆ ಹೆಚ್ಚಾದ ದ್ರವ ಒತ್ತಡದಿಂದ ಉಂಟಾಗುವ ಗಂಭೀರ ಕಣ್ಣಿನ ಕಾಯಿಲೆಯಾಗಿದ್ದು, ಇದು ಮೆದುಳಿಗೆ ಚಿತ್ರಗಳನ್ನು ರವಾನಿಸುವ ಆಪ್ಟಿಕ್ ನರಗಳನ್ನು ಹಾನಿಗೊಳಿಸುತ್ತದೆ. ಗ್ಲುಕೋಮಾವನ್ನು ” ನಿಶಬ್ದ ದೃಷ್ಟಿ ಚೋರ” ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ನೋವು ರಹಿತ ಮತ್ತು ಕ್ರಮೇಣ ದೃಷ್ಟಿ ಕಳೆದುಕೊಳ್ಳುವಂತೆ ಮಾಡುತ್ತದೆ, ಆಧಾರ ಆರಂಭಿಕ ಹಂತಗಳಲ್ಲಿ ಯಾವುದೇ ರೋಗ ಲಕ್ಷಣಗಳಲ್ಲಿ ಮತ್ತು ಕಣ್ಣಿನ ಪರೀಕ್ಷೆಯ ಸಮಯದಲ್ಲಿ ಮಾತ್ರ ಇದನ್ನು ಕಂಡು ಹಿಡಿಯಬಹುದು. ರೋಗ ನಿರ್ಣಯ ಮಾಡದಿದ್ದರೆ ಮತ್ತು ಚಿಕಿತ್ಸೆ ನೀಡದಿದ್ದರೆ, ಗ್ಲುಕೋಮಾ ದೃಷ್ಟಿಗೆ ಬದಲಾಯಿಸಲಾಗದ ನಷ್ಟವನ್ನು ತರುವುದಕ್ಕೆ ಕಾರಣವಾಗಬಹುದು. ಗ್ಲುಕೋಮಾ ಸಾಮಾನ್ಯವಾಗಿ ಬಾಹ್ಯದೃಷ್ಟಿಗೆ ಪರಿಣಾಮ ಬೀರುತ್ತದೆ ಮತ್ತು ಹಾನಿ ಸಂಭವಿಸಿದಾಗ ಮುಂದುವರಿದ ಹಂತದಲ್ಲಿ ಮಾತ್ರ ನೀವು ಈ ಕಾಯಿಲೆಯಿಂದ ಬಳಲುತ್ತಿದ್ದೇವೆ ಎಂದು ತಿಳಿದುಕೊಳ್ಳಲು ಸಾಧ್ಯ.
ಪ್ರಸ್ತುತ ೬೦ ದಶಲಕ್ಷಕ್ಕೂ ಹೆಚ್ಚು ಜನರು ಗ್ಲುಕೊಮಾದಿಂದ ಬಳಲುತ್ತಿದ್ದಾರೆ ಮತ್ತು ವಿಶ್ವ ಅರೋಗ್ಯ ಸಂಸ್ಥೆ (ಡಬ್ಲ್ಯೂ. ಎಚ್ ಒ) ಅಂದಾಜಿಸಿದಂತೆ ಈ ರೋಗವು ೨೦೨೦ರ ವೇಳೆಗೆ ೮೦ ದಶಲಕ್ಷಕ್ಕೂ ಹೆಚ್ಚು ಜನರ ಮೇಲೇ ಪರಿಣಾಮ ಬೀರುತ್ತದೆ.

ನಿಮ್ಮ ಜೀವನದುದ್ದಕ್ಕೂ ಆರೋಗ್ಯಕರ ದೃಷ್ಟಿಯನ್ನು ಆನಂದಿಸಲು ನೀವು ಬಯಸಿದರೇ ನಿಮ್ಮ ಕಣ್ಣುಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಬದಲಾಯಿಸಲಾಗದ ಕುರುಡುತನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ಗ್ಲುಕೋಮಾದ ಪ್ರಕರಣಗಳಲ್ಲಿ, ಭಾರತವು ೧೨ ಮಿಲಿಯನ್ ಅಂದಾಜು ಸಂಖ್ಯೆಯನ್ನು ಹೊಂದಿದೆ. ಇದು ಗ್ಲುಕೋಮಾದ ಜಾಗತೀಕ ಹೊರೆಯ ಐದನೆಯ ಒಂದು ಭಾಗವಾಗಿದೆ. ರೋಗವನ್ನು ಗುಣಪಡಿಸಲಾಗದಿದ್ದರೂ, ಗ್ಲುಕೋಮಾದ ಪ್ರಗತಿಯನ್ನು ನಿಲ್ಲಿಸಬಹುದು. ಮತ್ತು ಮೊದಲೇ ಪತ್ತೆಯಾದರೆ ಕುರುಡುತಮನವನ್ನು ತಡೆಯಬಹುದು.

ಗ್ಲುಕೋಮಾದ ಗಮನಾರ್ಹ ಪ್ರಮಾಣವು ವಿಶ್ವಾದ್ಯಂತ ಜನರಲ್ಲಿ ಪತ್ತೆಯಾಗಿಲ್ಲ. ದೃಷ್ಟಿ ಕಳೆದುಕೊಳ್ಳುವುದು, ಆಗಾಗ್ಗೆ ತಲೆನೋವು, ಕಣ್ಣುಗಳ ಸುತ್ತಲೂ ಬಣ್ಣದ
ಹಾಲೋಸ್ ಕಾಣಿಸುವುದು, ಅಥವಾ ವಾಕರಿಕೆ ಮತ್ತು ವಾಂತಿಯೊಂದಿಗೆ ಕಣ್ಣುಗುಡ್ಡೆಯ ಸುತ್ತ ನೋವು ಮತ್ತು ಒತ್ತಡದಂತಹ ಯಾವುದೇ ಅಸಾಮಾನ್ಯ ಲಕ್ಷಣಗಳನ್ನು ತಳಿ ಹಾಕಬೇಡಿ.

ಸಂಪೂರ್ಣ ಕಣ್ಣಿನ ಪರೀಕ್ಷೆಯಿಂದ ಮಾತ್ರ ಗ್ಲುಒಕತ್ ರೋಗ ನಿರ್ಣಯ ಮಾಡಬಹುದಾಗಿರುವುದರಿಂದ, ನಾರಾಯಣ ನೇತ್ರಾಲಯವು ಪ್ರತಿ ೨ ವರ್ಷಗಳಿಗೊಮ್ಮೆ, ಎಲ್ಲರಿಗೂ ಸಮಗ್ರಕಣ್ಣಿನ ಪರೀಕ್ಷೆಯನ್ನು ಶಿಫಾರಸು ಮಾಡುತ್ತದೆ. ಎನ್ ಎ .ಬಿ. ಎಚ್ ಮಾನ್ಯತೆ ಪಡೆದ ಸಂಸ್ಥೆ, ನಾರಾಯಣ ನೇತ್ರಾಲಯವು ಅತ್ಯಾಧುನಿನಿಕ / ತಂತ್ರಜ್ಞಾನಗಳೊಂದಿಗೆ ಉತ್ತಮ ಕಣ್ಣಿನ ಆರೈಕೆಯನ್ನು ನೀಡುತ್ತದೆ. ಉತ್ತಮಕಾರ್ಯನಿರ್ಣಯದ (ತಪಾಸಣೆಯ) ಫಲಿತಾಂಶಗಳನ್ನು ಹೊಂದಿರುವುದಲ್ಲದೆ ನುರಿತ ಮತ್ತು ಅನುಭವಿ ವೈದ್ಯರುಗಳ ತಂಡವನ್ನು ಹೊಂದಿದೆ ಮತ್ತ್ತು ರೋಗಿಗಳ ಆರೈಕೆಯೊಂದಿಗೆ ಕೈಗೆಟ್ಟುವ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತದೆ. ನಿಮ್ಮ ದೃಷ್ಟಿಯಲ್ಲಿ ಯಾವುದೇ ಯಾವುದೇ ಬದಲಾವಣೆಗಳನ್ನು ನೀವು ಗಮನಿಸಿದರೆ ನಿಮ್ಮ ದೃಷ್ಟಿಯನ್ನು ಬದಲಾಯಿಸಹೌದು.

Book an Appointment
Call Us