ನಿಮ್ಮ ಕಣ್ಣಿನ ಮೇಲೆ ರೆಪ್ಪೆ ಅಥವಾ ಕೆಳಗಿನ ರೆಪ್ಪೆಗಳಲ್ಲಿ ಕಾಣಿಸುವ ನೋವುಯುಕ್ತ ಚರ್ಮದ ಊತವೇ (ಗುಳ್ಳೆಯೇ) ಸ್ಟೈ ಆಗಿರಬಹುದು

ನಿಮ್ಮ ಕಣ್ಣಿನ ಮೇಲೆ ರೆಪ್ಪೆ ಅಥವಾ ಕೆಳಗಿನ ರೆಪ್ಪೆಗಳಲ್ಲಿ ಕಾಣಿಸುವ ನೋವುಯುಕ್ತ ಚರ್ಮದ ಊತವೇ (ಗುಳ್ಳೆಯೇ) ಸ್ಟೈ ಆಗಿರಬಹುದು

ಸ್ಟೈ ಎಂಬುದು ಸಾಮಾನ್ಯ ಕಣ್ಣು ರೆಪ್ಪೆಯ ಸೋಂಕು, ಇದು ಎಲ್ಲಾ ವಯಸ್ಸಿನ ಜನರನ್ನು ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಅಥವಾ ಎರಡು ಬಾರಿ ಬಂದು ಹೋಗಿರುತ್ತದೆ. ಸ್ಟೈ ಎಂಬುದು ಹೆಚ್ಚಾದ ಕೊಬ್ಬು ಅಥವಾ ಸೂಕ್ಶ್ಮಾಣು ಜೀವಿಗಳಿಂದ ಕೊಬ್ಬಿನ ಗ್ರಂಥಿ ಅಥವಾ ಕೂದಲು ಹುಟ್ಟುವ ಜಾಗದ ಕಟ್ಟುವಿಕೆಯಿಂದ ಉಂಟಾಗುವ ಬಾವು. ಸುಮಾರು ೯೫% ಸ್ಟೈಗಳು ಸಾಮಾನ್ಯವಾಗಿ ಸ್ಟ್ಯಾಫಿಲೋಕೋಕಸ್ ಅಯುರೆಯಸ್ ಬ್ಯಾಕ್ಟೀರಿಯಾದಿಂದ ಉಂಟಾಗುತ್ತವೆ, ಸ್ಟೈ ಸಣ್ಣ ಕಿರಿಕಿರಿಯಾಗಿದ್ದರು, ಇದು ತುಂಬಾ ನೋವು ಮತ್ತು ಅನಾನುಕೂಲವನ್ನುಂಟು ಮಾಡುತ್ತದೆ.

ಸ್ಟೈ ಎಂಬುದು ಮೇಲಿನ ಅಥವಾ ಕೆಳಗಿನ ಕಣ್ಣು ರೆಪ್ಪೆಯ ( ಬಾಹ್ಯ / ಹೊರಗಿನ ಸ್ಟೈ) ಹೊರಭಾಗದಲ್ಲಿ, ಹಾಗೆಯೇ ಒಳಭಾಗದಲ್ಲಿ, ರೆಪ್ಪೆಗೂದಲು ಬೆಳೆಯುವ ರೆಪ್ಪೆಯ ಅಂಚಿನ ಬಳಿ ಸಂಭವಿಸಬಹುದು. ಬಾಹ್ಯ (ಹೊರಗಿನ) ಶೈಲಿಯವು ಹೆಚ್ಚು ಸಾಮಾನ್ಯವಾಗಿದೆ, ಮೇಲೆಯೇ ಕಾಣಿಸಿಕೊಳುತ್ತದೆ ಮತ್ತು ತ್ವರಿತವಾಗಿ ಗುಣವಾಗುತ್ತವೆ ಮತ್ತು ಒಳಗಿನ ಸ್ಟೈಗಳು ತೀರಾ ಸಾಮಾನ್ಯವಲ್ಲ ಹಾಗೂ ಹೆಚ್ಚು ಉಪದ್ರವಿಯಾಗಿದೆ.

ಅವು ಬಹಳ ಬೇಗನೆ ಅಭಿವೃದ್ಧಿ ಹೊಂದಿದ್ದರೂ, ಸ್ಟೈಗಳು ಸಾಮಾನ್ಯವಾಗಿ ತೊಂದರೆಯುಂಟು ಮಾಡುವುದಿಲ್ಲ ಮತ್ತು ಯಾವುದೇ ದೃಷ್ಟಿ ತೊಂದರೆಗಳಿಗೆ ಕಾರಣವಾಗುವುದಿಲ್ಲ, ಹೆಚ್ಚಿನ ಸ್ಟೈಗಳು ೫-೬ ದಿಗಳಲ್ಲಿ ಸರಳವಾದ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾದ ಕಣ್ಣಿಗೆ, ಮೃದುವಾದ ಮತ್ತು ಸ್ವಚ್ಛವಾದ ಬಟ್ಟೆಯನ್ನು ಬೆಚ್ಚಗಿನ ಬಿಸಿ ನೀರಿನಲ್ಲಿ ಅದ್ದಿ ಕಣ್ಣಿಗೆ ೫ರಿಂದ ೧೦ ನಿಮಿಷ ಕಾಲ ಸ್ಟೈನ ಮೇಲೆ ಶಾಖ ಕೊಡುವುದರಿಂದ ಇದನ್ನು ದಿನಕ್ಕೆ ೩-೪ ಬಾರಿ ಮಾಡಬೇಕಾಗುತ್ತದೆ. ಈ ಚಿಕಿತ್ಸೆ ಅನ್ವಯಿಸಿದರೂ ಸ್ಟೈ ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದರೆ ಅಥವಾ ಕಣ್ಣು ರೆಪ್ಪೆಯ ಆಚೆಗಿನ ಊತ ಮತ್ತು ಅದು ಕೆಂಪು ಬಣ್ಣವನ್ನು ಹೊಂದಿದ್ದರೆ, ನೀವು ಗಮನಿಸಿದರೆ (ಕಣ್ಣು ಅಥವಾ ಮುಖದ ಇತರ ಭಾಗಗಳಲ್ಲಿ) ತಕ್ಷಣ ಕಣ್ಣಿನ ವೈದ್ಯರನ್ನು ಭೇಟಿ ಮಾಡಿ.

ನಿಮಗೆ ಆಗಾಗ್ಗೆ ಕಣ್ಣಲ್ಲಿ ಸ್ಟೈ ಅಭಿವೃದ್ಧಿ ಆಗುತ್ತಿದೆಯಾ?

ನಾರಾಯಣ ನೇತ್ರಾಲಯವು ಹಠಮಾರಿ ಸ್ಟೈಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತದೆ. ಇದು ದೊಡ್ಡದು ಮತ್ತು ನೋವಿನಿಂದ ಕೂಡಿರುತ್ತದೆ ಮತ್ತು ಸ್ವಯಂ ಆರೈಕೆ ಕ್ರಮಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಮ್ಮ ಹೆಚ್ಚು ನುರಿತ ಆಕ್ಯುಲೊ ಪ್ಲಾಸ್ಟಿ ತಜ್ಞರು ನಿಮ್ಮ ಕಣ್ಣಿನ ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಿ ಸಹಾಯ ಮಾಡಲು ಸರಿಯಾದ ಜ್ಞಾನ ಮತ್ತು ರೋಗ ನಿರ್ಣಯಕ್ಕೆ ಬೇಕಾದ ಸಾಧನಗಳನ್ನು ಹೊಂದಿದೆ. ಚಿಕಿತ್ಸೆಯಲ್ಲಿ ಪ್ರಮುಖವಾಗಿ ಆಂಟಿಬಯೋಟಿಕ್ ಕ್ರೀಮ್ / ಮುಲಾಮು ಅಥವಾ ಕಣ್ಣಿನ ದ್ರಾವಣಗಳು, ಊತವನ್ನು ಕಡಿಮೆ ಮಾಡಲು ಸ್ಟೀರಾಯ್ಡ್ ಚುಚ್ಚುಮದ್ದು ಅಥವಾ ಸ್ಟೈ ಅನ್ನು ಒಣಗಿಸುವುದಕ್ಕಾಗಿ / ಹೊರದೂಡಿಸಲು ಸ್ಥಳೀಯ ಅರಿವಳಿಕೆಯ ಅಡಿಯಲ್ಲಿ ಶಸ್ಟ್ರ ಚಿಕಿತ್ಸೆಯ ಜೊತೆಗೆ ಛೇದನವನ್ನು ಒಳಗೊಂಡಿರುತ್ತದೆ. ಸ್ಟೈ ಚಿಕೆತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೯೫೩೮೦೨೨೪೬೬ ರಲ್ಲಿ ನಾರಾಯಣ ನೇತ್ರಾಲಯದ ಸೌಂದರ್ಯ ವರ್ಧಕದ (ಅಸ್ಥೆಟಿಕ್ ಸ್ಟುಡಿಯೋ)ಸ್ಟುಡಿಯೋವನ್ನು ಸಂಪರ್ಕಿಸಿ.

ಸ್ಟೈಗೆ ಕಾರಣವೇನು ಮತ್ತು ಅದರ ರೋಗಲಕ್ಷಣಗಳು, ಸ್ಟೈಗಳು ನೀವು ಹೇಗೆ ಚಿಕಿತ್ಸೆ ಪಡೆಯಬಹುದು ಮತ್ತು ತಪ್ಪಿಸಬಹುದು ಮತ್ತು ಸ್ಟೈಗೆ ವೈದ್ಯಕೀಯ ಸಹಾಯವನ್ನು ಯಾವಾಗ ಪಡೆಯಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

Book an Appointment
Call Us