Eye Donation

eye donation

 

ನೇತ್ರ ದಾನ ಎಂದರೇನು?
ಉದಾರ ಹೃದಯದ ಒಬ್ಬ ವ್ಯಕ್ತಿ ತಾನು, ತನ್ನ ಸ್ವಯಂ ಪ್ರೇರಣೆಯಿಂದ ತನ್ನ ಕಣ್ಣುಗಳನ್ನು, ತನ್ನ ಸಾವಿನ ನಂತರ ಇಬ್ಬರು ದೃಷ್ಟಿ ಹೀನರಿಗೆ  ದಾನ ನೀಡುವುದರ ಸಲುವಾಗಿ ಪ್ರತಿಜ್ಞೆ ಮಾಡಿ ಕೊಡುವುದನ್ನೇ ನೇತ್ರದಾನ ಎಂದು ಕರೆಯಲಾಗುತ್ತದೆ. ಕಾರ್ನಿಯಾದ ಸಮಸ್ಯೆಗಳು,  ಮಕ್ಕಳು ಹಾಗು ವಯಸ್ಕರರಲ್ಲಿ ದೃಷ್ಟಿದೋಷಕ್ಕೆ ಪ್ರಮುಖ ಕಾರಣವಾಗಿವೆ. ಇಂತಹ ದೃಷ್ಟಿ ಹೀನತೆಯನ್ನು ಕಾರ್ನಿಯಾ  ಬದಲಾಯಿಸುವ ವಿಧಾನ ಅಥವಾ ಕಾರ್ನಿಯಲ್ ಟ್ರಾನ್ಸ್ಪ್ಲಾಂಟೇಷನ್ ಮುಖೇನ ಗುಣಪಡಿಸಬಹುದು.

 

ಕನ್ನಡಕಗಳನ್ನು ಬಳಸುವ ವ್ಯಕ್ತಿಗಳಿಂದ ನೇತ್ರದಾನ ಮಾಡಲು ಸಾಧ್ಯವಿಲ್ಲ.
ದೂರ ದೃಷ್ಟಿ, ಸಮೀಪ ದೃಷ್ಟಿ ಹಾಗು ಆಸ್ಟಿಗ್ಮಾಟಿಸಂ ಮುಂತಾದ ದೃಷ್ಟಿಗೆ ಸಂಬಂಧಿಸಿದ ರೋಗಗಳಿಂದ ನರಳುವವರು ಸಹ ನೇತ್ರ ದಾನ ಮಾಡಬಹುದು. ಏಕೆಂದರೆ, ಈ ಸಮಸ್ಯೆಗಳು ಕೇವಲ ಮಸೂರಕ್ಕೆ ಸಂಬಂಧಿಸಿದ್ದೇ ಹೊರೆತು ಕಾರ್ನಿಯಾಗೆ ಸಂಬಂಧಪಟ್ಟಿದ್ದಲ್ಲ. ತನ್ನ ಮೃತ್ಯುವಿನ ಸಂದರ್ಭದಲ್ಲಿ ಯಾರೊಬ್ಬರಿಗೆ ಕಾರ್ನಿಯಾ ಸ್ಪಷ್ಟವಾಗಿ, ಪಾರದರ್ಶಕವಾಗಿ ಹಾಗು ಆರೋಗ್ಯಕರವಾಗಿ ಇದೆಯೋ ಅವರೆಲ್ಲರೂ ಕೂಡ ನೇತ್ರದಾನಕ್ಕೆ ಸೂಕ್ತವಾದವರೇ. ಹಿಂದೆಂದಾದರು ದೃಷ್ಟಿ ತಿದ್ದುಪಡಿಸುವ ಸಲುವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು ಸಹ ನೇತ್ರ ದಾನವನ್ನು ಮಾಡಬಹುದು.

 

ನಾವು ಕಣ್ಣುಗಳನ್ನು ಏಕೆ ದಾನ ಮಾಡಬೇಕು?

ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು ಒಂದು ಕೋಟಿ 50 ಲಕ್ಷ ಅಂಧರಿದ್ದು, ಅವರುಗಳಲ್ಲಿ ಸುಮಾರು 68 ಲಕ್ಷ ಪಾರದರ್ಶಕ ಜನರಿಗೆ ಪಟಲಕ್ಕೆ ಸಂಬಂಧಿಸಿದ ದೃಷ್ಟಿಹೀನತೆ ಇದ್ದು, ಕಾರ್ನಿಯಾದ ಬದಲಿಸುವಿಕೆಯಿಂದ ಇವರುಗಳ ದೃಷ್ಟಿಮರಳುವ ಸಾಧ್ಯತೆ ಇದೆ. ಮಾನವ ಅಂಗಾಂಶಗಳನ್ನು ಸಮೀಕರಿಸಬಲ್ಲ ಇನ್ಯಾವುದೇ ಅಂಶಗಳಿಲ್ಲ ಎಂಬ ಕಾರಣದಿಂದ ನಾವೆಲ್ಲರೂ ನಮ್ಮ ಮೃತ್ಯುವಿನ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರತಿಜ್ಞೆ ಮಾಡುವ ಅಗತ್ಯವಿದೆ. ನೀವು ದಾನ ಮಾಡುವ ಎರಡು ಕಣ್ಣುಗಳಿಂದ ಇಬ್ಬರು ದೃಷ್ಟಿ ಹೀನರು ಪುನರ್ ದೃಷ್ಟಿಯನ್ನು ಪಡೆಯುವ ಸದಾವಕಾಶವಿದೆ. ಕಾರ್ನಿಯಾದ ಹೊರೆತಾದ ಕಣ್ಣಿನ ಇನ್ನುಳಿದ ಬಾಗಗಳನ್ನು ಸಹ ಶಿಕ್ಷಣ ಹಾಗು ತರಬೇತಿಯ ಪ್ರಯುಕ್ತ ಉಪಯೋಗಿಸಬಹುದು. ಅದಷ್ಟೇ ಅಲ್ಲದೆ ಸಾಮಾನ್ಯ ಕಣ್ಣಿನ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಕಂಡು ಹಿಡಿಯುವುದರ ಸಲುವಾಗಿ ಮಾಡಲಾಗುವ ಸಂಶೋದನೆಯಲ್ಲೂ ಕೂಡ ಈ ಇತರ ಬಾಗಗಳು ನೆರವಾಗುತ್ತದೆ.

 

ನೇತ್ರದಾನ ಕಾರ್ಯಕ್ರಮದಲ್ಲಿ ನೇತ್ರ ನಿಧಿಗಳ (ಬ್ಯಾಂಕು) ಪಾತ್ರವೇನು?

ನೇತ್ರ ನಿಧಿ (ಬ್ಯಾಂಕು) ಅನ್ನೋದು ಉದಾತ್ತ ನಾಗರೀಕರು ದಾನ ನೀಡುವ ಕಣ್ಣುಗಳನ್ನು ಸಂಗ್ರಹಿಸುವ ಒಂದು ಲಾಭೋದ್ದೇಶವಿಲ್ಲದ ಸಂಸ್ಥೆ. ಈ ರೀತಿ ಸಂಗ್ರಹಿಸುವ ಕಣ್ಣುಗಳನ್ನು ವೈದ್ಯಕೀಯವಾಗಿ ಮೌಲ್ಯಮಾಪನ ಮಾಡಿ, ಪ್ರಕ್ರಿಯೆಗೊಳಿಸಿ, ಕಾರ್ನಿಯಾದ ಮರುಪಯೋಗ, ಬಿಳಿ ಗುಡ್ಡೆಯ ಪುನರ್ನಿರ್ಮಾಣ, ಶಿಕ್ಷಣ ತರಬೇತಿ ಮತ್ತು ಸಂಶೋಧನೆಗಾಗಿ ವಿತರಿಸಲಾಗುತ್ತದೆ. ಕಾರ್ನಿಯಾದ ಅಗತ್ಯವಿರುವವರನ್ನು ಪತ್ತೆ ಹಚ್ಚಿ ಅವರಿಗೆ ದಾನವಾಗಿ ಪಡೆದ ಕಾರ್ನಿಯಾವನ್ನು ತಲುಪಿಸುವಲ್ಲಿ ನೇತ್ರ ಬ್ಯಾಂಕುಗಳು ಪ್ರಮುಖ ಪಾತ್ರವಹಿಸಿ, ಕಾರ್ನಿಯಾದ ಅವಶ್ಯಕತೆ ಹಾಗು ಲಭ್ಯತೆಯ ಮಧ್ಯದಲ್ಲಿನ ಅಂತರವನ್ನು ನಿವಾರಿಸುವ ಜವಾಬ್ದಾರಿಯನ್ನು ವಹಿಸಿದೆ.

 

ಸತ್ಯ ಅಥವಾ ಮಿಥ್ಯ: ನೇತ್ರದಾನ ಪ್ರಮಾಣ ಪತ್ರದಲ್ಲಿ ಒಬ್ಬ ಮೃತಪಟ್ಟ ವ್ಯಕ್ತಿ ಸಹಿ ಮಾಡದ ಸಂದರ್ಭದಲ್ಲಿ ಅವರ ಸೋದರ ಸಂಬಂಧಿಕರು ನೇತ್ರದಾನಕ್ಕೆ ಒಪ್ಪಿಗೆ ನೀಡ ಬಹುದು.

ಸತ್ಯ: ಹೌದು! ಮೃತ ಪಟ್ಟ ವ್ಯಕ್ತಿ ನೋಂದಾಯಿತ ಕಣ್ಣಿನ ದಾನಿಯಾಗಿಲ್ಲದಿದ್ದರು ಸಹ, ಸಮೀಪದ ನೇತ್ರ ಬ್ಯಾಂಕನ್ನು ತಕ್ಷಣ ಸಂಪರ್ಕಿಸಿ ಅವರ ಸೋದರ ಸಂಬಂಧಿಕರು ನೇತ್ರ ದಾನಕ್ಕೆ ಒಪ್ಪಿಗೆ ನೀಡಬಹುದು. ಈ ಕಾರ್ಯವಿಧಾನವನ್ನು ಅಧಿಕೃತಗೊಳಿಸಲು ಒಂದು ಪತ್ರದಲ್ಲಿ ರುಜು ಮಾಡಬೇಕಾದ ಅಗತ್ಯವಿರುವುದು. ಒಂದು ವೇಳೆ ನೀವು ನೇತ್ರದಾನಕ್ಕೆ ಪ್ರತಿಜ್ಞೆ ಮಾಡದೇ ನಿಮ್ಮ ನೇತ್ರಗಳನ್ನು ದಾನ ಮಾಡಲು ಬಯಸುವಲ್ಲಿ, ನಿಮ್ಮ ಕುಟುಂಬ ಸದಸ್ಯರಿಗೆ ನಿಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿ ಅವರ ಸಹಕರಣೆಗೆ ಪಾತ್ರರಾಗ ಬೇಕಿರುವುದು ಅಗತ್ಯ.

Book an Appointment
Call Us