ಮಧುಮೇಹದ ರೆಟಿನೋಪತಿ – ನಿಯತವಾಗಿ ಕೇಳಲ್ಪಡುವ ಪ್ರಶ್ನೆಗಳು

Diabetic retinopathy kannada

ಮಧುಮೇಹದ ರೆಟಿನೋಪತಿ – ನಿಯತವಾಗಿ ಕೇಳಲ್ಪಡುವ ಪ್ರಶ್ನೆಗಳು

ಮಧುಮೇಹದ  ರೆಟಿನೋಪತಿ
ಮಧುಮೇಹದ ಕಾರಣದಿಂದಾಗಿ ಅಕ್ಷಿಪಟ ಹಾನಿಗೊಳಗಾಗುವುದನ್ನೇ  ಮಧುಮೇಹದ ರೆಟಿನೋಪತಿ ಎಂದು ಕರೆಯಲಾಗುತ್ತದೆ. ಇದು ಪ್ರಾರಂಭ, ಮಧ್ಯ ಸ್ಥಿತಿ ಹಾಗು ಅಂತಿಮ ಸ್ತಿತಿತಿ ಇರುವಂತಹ ಒಂದು ಪ್ರಕ್ರಿಯೆ ಎಂಬುದನ್ನ ನೆನಪಿನಲ್ಲಿಡಬೇಕು. ಮಧುಮೇಹದ ರೆಟಿನೊಪತಿಯ ಅಂತಿಮ ಸ್ಥಿತಿಯಲ್ಲಿ ಪೂರ್ಣ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಒಂದು ವೇಳೆ ಪ್ರಾರಂಭ ಹಾಗೂ ಮಧ್ಯಮ ಸ್ಥಿತಿಯಲ್ಲೇ ಸೂಕ್ತ ಚಿಕಿತ್ಸೆ ನೀಡಿದ್ದಲ್ಲಿ ಕಣ್ಣಿನ ಅರೋಗ್ಯ ಹದಗೆಡುವುದನ್ನು ತಪ್ಪಿಸ ಬಹುದು.

ಮಧುಮೇಹದ ರೆಟಿನೋಪತಿ ಉಂಟಾಗಲು ಕಾರಣವೇನು?
ಮಧುಮೇಹದ ರೆಟಿನೋಪತಿಯನ್ನು ಉಂಟು ಮಾಡುವ ಅಪಾಯಕಾರಿ ಅಂಶಗಳೆಂದರೆ; ಸರಿಯಾಗಿ ನಿಯಂತ್ರಿಸದ ಮದುಮೇಹ, ಏರಿಳಿತವಾಗುವ ರಕ್ತದ ಸಕ್ಕರೆ ಮಟ್ಟ, ಅಧಿಕ ರಕ್ತದೊತ್ತಡ, ದೂಮಪಾನ, ಅಧಿಕ ಕೊಬ್ಬಿನಂಶ, ರಕ್ತಹೀನತೆ, ಕಡಿಮೆ ಮಟ್ಟದ ಫೋಲಿಕ್ ಆಮ್ಲ, ಮೂತ್ರಪಿಂಡ ರೋಗ, ಹಾಗು ಹತ್ತು ವರ್ಷಕ್ಕೂ ಮೇಲ್ಪಟ್ಟ ಸಕ್ಕರೆ ರೋಗ (ಧೀರ್ಘ ಕಾಲೀಕ ಮಧುಮೇಹ), ಕೆಲವೊಮ್ಮೆ ನಿಯಂತ್ರಿತ ಮಧುಮೇಹವು ಸಹ ಮಧುಮೇಹದ ರೆಟಿನೋಪತಿಗೆ ಕಾರಣವಾಗಬಹುದು.

ಒಂದು ಕಣ್ಣು ಮಧುಮೇಹದ ರೆಟಿನೋಪತಿಯಿಂದ ತೊಂದರೆಗೊಳಗಾದ ಪಕ್ಷದಲ್ಲಿ, ಮತ್ತೊಂದು ಕಣ್ಣು ತೊಂದರೆಗೊಳಗಾಗ ಬಹುದೇ?
ಸಾಮಾನ್ಯವಾಗಿ ಮಧುಮೇಹದ ರೆಟಿನೋಪತಿ ಎರೆಡೂ ಕಣ್ಣನ್ನು ಬಾಧಿಸುತ್ತದೆ. ರೋಗ ಲಕ್ಷಣವು ಒಂದೇ ಕಣ್ಣಿನಲ್ಲಿ ಕಾಣಿಸಿಕೊಂಡರೂ, ಎರೆಡು ಕಣ್ಣುಗಳು ಬಾಧಿತವಾಗಿರುತ್ತದೆ, ಹಾಗೆಯೇ ಎರಡು ಕಣ್ಣುಗಳು ಸಮಾನವಾಗಿ ತೊಂದರೆಗೊಳಗಾಗಬೇಕೆಂಬ ನಿಯಮವೇನಿಲ್ಲ.

ಮಧುಮೇಹದ ಮ್ಯಾಕುಲಾರ್ ಎಡಿಮಾ ಎಂದರೇನು?
ಮಧುಮೇಹದ ಮ್ಯಾಕುಲಾರ್ ಎಡಿಮಾ ಅಥವಾ ಡಿ. ಎಮ್. ಇ ಅನ್ನೋದು, ಕಣ್ಣಿನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒಂದು ತೊಡಕು, ಇದನ್ನು ಮಧುಮೇಹದ ರೆಟಿನೋಪತಿ ಎಂದು ಕೂಡ ಕರೆಯಲಾಗುತ್ತದೆ. ಇಂತಹ ಸ್ಥಿತಿಯಲ್ಲಿ, ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶ ಅಕ್ಷಿಪಟಲದ ಸಣ್ಣ ರಕ್ತ ನಾಳಗಳನ್ನು ಹಾನಿ ಮತ್ತು ದುರ್ಬಲಗೊಳಿಸಿ, ಕಣ್ಣಿನ ಹಿಂಬಾಗದಿಂದ ರಕ್ತ ಹಾಗು ಇತರ ದ್ರವಗಳು ಸೋರುವಂತೆ ಮಾಡುತ್ತದೆ. ಈ ರೀತಿ ಅಕ್ಷಿಪಟಲದಲ್ಲಿ ಸಂಗ್ರಹಣೆ ಆಗುವ ದ್ರವದಿಂದ ಸುತ್ತಮುತ್ತಲಿನ ಅಂಗಾಂಶಗಳು ಊತವಾಗಬಹುದು, ಈ ಊತ ಅಕ್ಷಿಪಟಲದ ಮಧ್ಯಬಾಗದಲ್ಲಿದ್ದು, ತೀಕ್ಷ ದೃಷ್ಟಿಗೆ ಕಾರಣವಾಗುವ ಮ್ಯಾಕುಲಾದಲ್ಲೂ ಕಾಣಿಸಿಕೊಳ್ಳಬಹುದು. ಈ ಊತವನ್ನೇ ಮಧುಮೇಹದ ಮ್ಯಾಕುಲಾರ್ ಎಡಿಮಾ ಎಂದು ಕರೆಯಲಾಗುತ್ತದೆ. ಮಧುಮೇಹ ರೆಟಿನೋಪತಿ ಇರುವವರ ದೃಷ್ಟಿ ಕಳೆದುಕೊಳ್ಳುವಿಕೆಗೆ ಇದೇ ಪ್ರಮುಖ ಕಾರಣವಾಗಿದೆ.

 

ಮಧುಮೇಹದ ರೆಟಿನೋಪತಿಯ ಕಾರಣದಿಂದಾಗಿ ಉಂಟಾಗುವ ದೃಷ್ಟಿ ಹೀನತೆಯನ್ನು ತಡೆಗಟ್ಟಬಹುದೇ?
ಮಧುಮೇಹದ ಸರಿಯಾದ ನಿರ್ವಹಣೆ ಹಾಗು ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣೆ ಮುಂತಾದ ಕ್ರಮಗಳನ್ನು ಕೈಗೊಳ್ಳುವುದರಿಂದ ಮಧುಮೇಹ ರೆಟಿನೋಪತಿಯಿಂದಾಗುವ ದೃಷ್ಟಿ ಹೀನತೆಯನ್ನು ತಡೆಗಟ್ಟ ಬಹುದು. ಇದು ಸಕ್ಕರೆ ರೋಗದ ಔಷಧಿಯನ್ನು ಸರಿಯಾಗಿ ಹಾಗು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುವುದು;ನಿಗದಿತ ಆಹಾರಗಳನ್ನಷ್ಟೇ ಸೇವಿಸುವುದು, ದಿನಚರಿ/ವಾರಕ್ಕೊಮ್ಮೆ ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು; ನಿಯಮಿತವಾಗಿ ವ್ಯಾಯಾಮ ಮಾಡಿ ಸಾಮಾನ್ಯ ದೇಹದ ತೂಕವನ್ನು ಕಟ್ಟುಪಾಡಿನಲ್ಲಿರುಸುವುದು; ರಕ್ತದೊತ್ತಡವನ್ನು ನಿಯಂತ್ರಿಸುವುದು; ನಿಯತಕಾಲೀಕ ಕಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳುವುವುದು; ಧೂಮಪಾನ ಹಾಗೂ ಮಧುಪಾನದಿಂದ  ದೂರವಿರುವಿಕೆಯಿಂದ ದೂರವಿರುವದೇಕೆಯಿಂದ ಹೆಚ್ಚು ಸಾಧ್ಯ.

ಅಧಿಕ ರಕ್ತದೊತ್ತಡದ ರೆಟಿನೋಪತಿ ಎಂದರೇನು?
ಅಧಿಕ ರಕ್ತದೊತ್ತಡದಿಂದ ಅಕ್ಷಿಪಟಲದ ನಾಳೀಯಕ್ಕೆ (ರಕ್ತನಾಳಕ್ಕೆ) ಹಾನಿಯುಂಟಾಗುವುದನ್ನೇ ಅಧಿಕ ರಕ್ತದೊತ್ತಡದ ರೆಟಿನೋಪತಿ ಎಂದು ಕರೆಯಲಾಗುತ್ತದೆ. ಕಾಲ ಕಳೆದಂತೆ ಕಣ್ಣಿಗೆ ಅಗತ್ಯವಾದ ರಕ್ತವನ್ನು ಒದಗಿಸುವ ಅತಿ ಸಣ್ಣ ಸೂಕ್ಷ್ಮವಾದ ರಕ್ತನಾಳಗಳಲ್ಲಿ, ಅಧಿಕ ರಕ್ತದೊತ್ತಡದಿಂದ ಹಾನಿಯುಂಟಾಗಬಹುದು. ಈ ತೊಂದರೆಯಿಂದ ಅಕ್ಷಿಪಟಲಕ್ಕೆ ಅಗತ್ಯವಾದ ರಕ್ತ ಹರಿಯುವುದರಲ್ಲಿ ತಡೆ ಉಂಟಾಗಿ, ಅಕ್ಷಿಪಟಲದ ಪ್ರಕ್ರಿಯೆಗೆ ಮಿತಿ ಉಂಟಾಗಿ, ದೃಷ್ಟಿ ನರಗಳಲ್ಲಿನ ಒತ್ತಡ ಹೆಚ್ಚಾಗಿ, ಇದರಿಂದ ದೃಷ್ಟಿ ಮಸುಕಾಗುವುದು ಅಥವಾ ದೃಷ್ಟಿ ಹೀನತೆ ಉಂಟಾಗುವ ಸಾಧ್ಯತೆ ಇದೆ. ಒಂದು ವೇಳೆ ನಿಮಗೆ ಮಧುಮೇಹ ಹಾಗು ಅಧಿಕ ರಕ್ತದೊತ್ತಡ, ಎರೆಡು ತೊಂದರೆಗಳು ಇದ್ದ ಪಕ್ಷದಲ್ಲಿ ನೀವು ಇಂತಹ ತೊಂದರೆಗಳಿಗೆ ಒಳಗಾಗುವ ಸಾಧ್ಯತೆಗಳು ಇನ್ನೂ ಹೆಚ್ಚು.

ತೀವ್ರ ರಕ್ತದೊತ್ತಡದಿಂದ ದೃಷ್ಟಿ ಮಸುಕಾಗಲು ಸಾಧ್ಯವೇ?
ಚಿಕಿತ್ಸೆ ಮಾಡದ ತೀವ್ರ ರಕ್ತದೊತ್ತಡದಿಂದ ಹೃದಯ, ಮೆದುಳು, ಮೂತ್ರಪಿಂಡ,ಮುಂತಾದ ಪ್ರಮುಖ ಅಂಗಗಳು ಅಷ್ಟೇ ಅಲ್ಲ, ಅದು ನಿಮ್ಮ ದೃಷ್ಟಿಯನ್ನು ಬಾಧಿಸಿ, ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ನಿರಂತರ ಚಿಕಿತ್ಸೆ ನೀಡಲಾರದ ಅಧಿಕ ರಕ್ತದೊತ್ತಡವು ನಿಮ್ಮ ಕಣ್ಣಿನ ಅಕ್ಷಿಪಟಲಕ್ಕೆ ರಕ್ತವನ್ನು ಸಂಗ್ರಹಿಸುವ ನಾಳಗಳನ್ನು ಹಾನಿಗೊಳಿಸಿ, ಕಣ್ಣೊಳಕ್ಕೆ ರಕ್ತ ಸೋರುವಂತೆ ಮಾಡಿ, ಮಸುಕು ದೃಷ್ಟಿ ಅಥವಾ ದೃಷ್ಟಿ ಹೀನತೆ ಮುಂತಾದ ಪ್ರಯಾಸಕರ ತೊಂದರೆಗಳನ್ನು ತರಬಹುದು. ಅಧಿಕ ರಕ್ತದೊತ್ತಡದಿಂದಾಗುವ ಪಾರ್ಶ್ವವಾಯು (stroke) ನಿಂದ ದೃಷ್ಟಿ ಮಸುಕಾಗುವುದು.

ಅಧಿಕ ರಕ್ತದೊತ್ತಡವಿರುವವರು ಎಷ್ಟು ದಿನಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸುವುದು ಉತ್ತಮ?
ಅಧಿಕ ರಕ್ತದೊತ್ತಡವಿರುವವರು ನಿಯಮಿತವಾಗಿ ತಮ್ಮ ರಕ್ತದೊತ್ತಡದ ಪರೀಕ್ಷೆ ಮಾಡಿಸಿಕೊಳ್ಳುವುದಷ್ಟೇ ಅಲ್ಲದೆ ನೇತ್ರಶಾಸ್ತ್ರಜ್ಞರು ಅಥವಾ ರೆಟಿನಾ ತಜ್ಞರನ್ನು ಭೇಟಿ ಮಾಡಿ ಕಣ್ಣನ್ನು ಪರೀಕ್ಷಿಸಿಕೊಳ್ಳಬೇಕು. ನೇತ್ರಶಾಸ್ತ್ರಜ್ಞರು ರೆಟಿನಾ (ಕಣ್ಣಿನ ಹಿಂಭಾಗ) ವನ್ನು ಪರೀಕ್ಷಿಸಿ, ಅಧಿಕ ರಕ್ತದೊತ್ತಡದಿಂದ ಕಣ್ಣಿಗೆ ರಕ್ತ ಸಂಗ್ರಹಣೆ ಮಾಡುವ ಸಣ್ಣ ರಕ್ತ ನಾಳಗಳಿಗೆ ಹಾನಿ ಉಂಟಾಗಿದಿಯೇ ಎಂದು ಪರೀಕ್ಷಿಸಲಾಗುವುದು. ರೋಗಿಯ ಭೇಟಿ ಹಾಗು ಮರುಭೇಟಿಯ ಆವರ್ತನವನ್ನು, ರೋಗಿಯ ಹಾಗು ರೋಗದ ಪರಿಸ್ಥಿತಿಯನ್ನು ಅವಲಂಬಿಸಿ ನೇತ್ರಶಾಸ್ತ್ರಜ್ಞರೇ   ನಿರ್ಧರಿಸುವರು.

 

ಮಧುಮೇಹದ ರೆಟಿನೋಪತಿಗೆ ಲಭ್ಯವಿರುವ ಚಿಕಿತ್ಸಾ ವಿಧಾನಗಳು ಯಾವುವು?
ಸ್ವಲ್ಪ ಪ್ರಮಾಣದ ಮಧುಮೇಹ ರೆಟಿನೋಪತಿಯನ್ನು ಆಹಾರ ಪದ್ದತಿಯಲ್ಲಿ ಸೂಕ್ತ ಬದಲಾವಣೆ ಹಾಗೂ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಸೂಕ್ತ ನಿರ್ವಹಣೆ ಮುಂತಾದ ಕ್ರಮಗಳಿಂದ ಸರಿಪಡಿಸಬಹುದು. ಪ್ರಯಾಸಕರ ಮಧುಮೇಹ ರೆಟಿನೋಪತಿಯ ಕಾರಣದಿಂದ ಸೋರುವಂತಹ ರಕ್ತವನ್ನು ತಡೆಗಟ್ಟಿ ಮಸುಕು ದೃಷ್ಟಿಯನ್ನು ಸುಧಾರಿಸಲು ಲೇಸರ್ ಚಿಕಿತ್ಸೆ ಅಥವಾ ಕಣ್ಣಿನ ಒಳಬಾಗದಲ್ಲಿನ ಜೆಲ್ಲಿಯಂತಹ ವಸ್ತುವನ್ನು ಹೊರತೆಗೆಯುವ ವಿಟ್ರೆಕ್ಟಮಿ ಚಿಕಿತ್ಸೆಯ ಅಗತ್ಯವಿರುತ್ತದೆ. ಅಕ್ಷಿಪಟಲದ ಊತ ಅಥವಾ ಅಸಾಮಾನ್ಯ ರಕ್ತ ನಾಳಗಳು ಬೆಳೆಯುವುದನ್ನು ತಡೆಗಟ್ಟಲು ಸ್ಟಿರಾಯ್ಡ್ ಅಥವಾ ರಕ್ತನಾಳಗಳ ಬೆಳವಣಿಗೆಯ ಪ್ರತಿರೋಧಕ ಔಷಧಿಗಳ ಅಗತ್ಯವಿರುವ ಸಾಧ್ಯತೆ ಇರುತ್ತದೆ.

Book an Appointment
Call Us