ಕ್ಯಾಟರಾಕ್ಟ್ (ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ) – ಸಾಮಾನ್ಯವಾಗಿ ಮೂಡುವ ಪ್ರೆಶ್ನೆಗಳು

kannada cataract faq new

ಕ್ಯಾಟರಾಕ್ಟ್ (ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ) – ಸಾಮಾನ್ಯವಾಗಿ ಮೂಡುವ ಪ್ರೆಶ್ನೆಗಳು

  1. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯು ಎಷ್ಟು ಸಮಯ ತೆಗೆದು ಕೊಳ್ಳುತ್ತದೆ?

ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯು ಸಾಮಾನ್ಯ ರೀತಿಯದ್ದಾದರೆ 5-10 ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ. ಕಷ್ಟಕರದ್ದಾದರೆ 1 ಗಂಟೆಗಳ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

  1. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯು ಒಂದು ದಿನದ ಚಿಕಿತ್ಸೆಯೇ?

ಹೌದು, ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯು ಒಂದು ದಿನದ ಚಿಕಿತ್ಸೆ. ನೀವು ಶತ್ರ್ಸ್ ಚಿಕಿತ್ಸಾ ನಂತರ ಎರಡು ತಾಸುಗಳ ಕಾಲ ವೈದ್ಯರ ನಿಗಾ ಇರಬೇಕಾಗುತ್ತದೆ ಮತ್ತು ಶಸ್ತ್ರ ಚಿಕಿತ್ಸಾ ನಂತರದ ದಿನಗಳ ಸೂಚನೆಯನ್ನು ತಿಳಿಸಿಕೊಡಲಾಗುತ್ತದೆ, ನಂತರ ಮನೆಗೆ ಹೋಗಬಹುದು.

  1. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯು ಒಂದು ದಿನದ ಚಿಕಿತ್ಸೆಯಾದರೂ ವಿಮೆ ಪಡೆದುಕೊಳ್ಳಬಹುದೇ?

ಹೌದು, ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯು ಬಹುತೇಕ ಎಲ್ಲಾ ವಿಮಾ ವಿಭಾಗಕ್ಕೆ ಒಳಪಡುತ್ತದೆ. ದಯವಿಟ್ಟು ಮುಂದಿನ ಆಪ್ತ ಸಮಾಲೋಚನೆಗೆ ವಿಮಾ ವಿಭಾಗದಲ್ಲಿ ಸಂಪರ್ಕಿಸಿ.

  1. ಕಣ್ಣಿನ ಪೋರೆಯ ಶಸ್ತ್ರ ಚಿಕಿತ್ಸೆಗೆ ಯಾವುದಾದರೂ ಸಕಾಲವಿದೆಯೇ?

ಇಲ್ಲ, ಕಣ್ಣಿನ ಪೋರೆಯ ಶಸ್ತ್ರ ಚಿಕಿತ್ಸೆಗೆ ಯಾವುದೇ ಸಕಾಲವಿಲ್ಲ, ನಿಮ್ಮ ಅನುಕೂಲತೆಗೆ ಅನುಗುಣವಾಗಿ, ಸಮಯ ಮತ್ತು ನಿಮ್ಮ ವೇಳಾಪಟ್ಟಿಯು ಅನುಮತಿಸಿದಾಗ ನೀವು ಯೋಜಿತ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯೊಂದಿಗೆ ಮುಂದುವರಿಯಬಹುದು.

5.ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ನಂತರ ದೂರದರ್ಶನ, ಲ್ಯಾಪ್‌ಟಾಪ್ / ಕಂಪ್ಯೂಟರ್ ಮತ್ತು ಮೊಬೈಲ್ ಅನ್ನು ನಾನು ವೀಕ್ಷಿಸಬಹುದೇ?

ಹೌದು, ನಿಯಮಿತ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ನಂತರ ನೀವು ಟಿವಿ, ಕಂಪ್ಯೂಟರ್ / ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ವೀಕ್ಷಿಸಬಹುದು. ಆದಾಗ್ಯೂ, ನಿಮ್ಮ ಕಣ್ಣಿನಲ್ಲಿ ಹೊಳಪಿರುವ ಕಾರಣ ಸ್ವಲ್ಪ ಆಯಾಸ ಅನುಭವಿಸಬಹುದು, ಆದರೆ ಸಮಯದೊಂದಿಗೆ ಅದಾಗಿಯೇ ಸರಿ ಹೋಗುತ್ತದೆ.

  1. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ನಂತರ ತಲೆಗೆ ಸ್ನಾನ ಮಾಡಬಹುದೇ?

ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ನಂತರ ನೀವು ಭುಜದಿಂದ ಕೆಳಗೆ ನಿಯಮಿತವಾದ ಸ್ನಾನವನ್ನು ಮಾಡಬಹುದು. ನೀವು ತಲೆ ಸ್ನಾನ / ಎನ್ನ ಸ್ನಾನವನ್ನು, ನಿಮ್ಮ ಕೂದಲನ್ನು ಶುಚಿಗೊಳಿಸುವ ಕೆಲಸ ಶಾಸ್ತ್ರ ಚಿಕಿತ್ಸೆಯ ಒಂದು ವಾರದ ನಂತರ ಮಾಡಬೇಕು.

7.ನನಗೆ ಅಡುಗೆ ಮಾಡಲು ರೂಡಿಯಿದೆ. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ನಂತರ ನಾನು ಅಡುಗೆ ಮಾಡಬಹುದೇ?

ಹೌದು, ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ನಂತರ ನೀವು ಅಡಿಗೆ ಮಾಡಬಹುದು. ನಿಮ್ಮ ರಕ್ಷಣಾತ್ಮಕ ಕನ್ನಡಕವನ್ನು ಧರಿಸಿಕೊಂಡು ಅಡುಗೆ ಮಾಡಿಕೊಳ್ಳಬಹುದು.

  1. ನೀವು ಒಂದೇ ದಿನ ಎರಡೂ ಕಣ್ಣಿನ ಮೇಲೆ ಶಸ್ತ್ರ ಚಿಕಿತ್ಸೆ ಮಾಡಬಹುದೇ?

ಇಲ್ಲ, ಒಂದೇ ದಿನದಂದು ಎರಡು ಕಣ್ಣುಗಳನ್ನು ಕಾರ್ಯಗತಗೊಳಿಸಲು (ಶಸ್ತ್ರ ಚಿಕಿತ್ಸೆ ಮಾಡಲು) ನಾವು ಸಲಹೆ ನೀಡುವುದಿಲ್ಲ. ನಾವು ಸಾಮಾನ್ಯ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಗಳ ನಡುವೆ ಕನಿಷ್ಟ 3 ದಿನಗಳ ಅಂತರವನ್ನು ಇರಿಸುತ್ತೇವೆ.

Book an Appointment
Call Us