ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮುನ್ನ ಒಳಗಿನ ಲೆನ್ಸ್ (ಇಂಟ್ರಾಕ್ಯುಲರ್ ಲೆನ್ಸ್) ಹೇಗೆ ನಿರ್ಣಯಿಸಲಾಗುತ್ತದೆ

kannada cataract campaign

ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮುನ್ನ ಒಳಗಿನ ಲೆನ್ಸ್ (ಇಂಟ್ರಾಕ್ಯುಲರ್ ಲೆನ್ಸ್) ಹೇಗೆ ನಿರ್ಣಯಿಸಲಾಗುತ್ತದೆ

 ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ನೈಸರ್ಗಿಕ ಮೋಡಯುಕ್ತವಾದ ಲೆನ್ಸನ್ನು ಕಣ್ಣಿನಿಂದ ತೆಗೆದು ಆಪ್ಟಿಕಲ್ ಲೆನ್ಸ್ ಅಥವಾ ಕೃತಕ ಲೆನ್ಸನ್ನು ಅಳವಡಿಸಲಾಗುತ್ತದೆ. ಅದನ್ನು ಇಂಟ್ರಾಕ್ಯುಲರ್ ಲೆನ್ಸ್ (ಐ. ಒ. ಎಲ್) / ಒಳಗಿನ ಲೆನ್ಸ್ ಎಂದು ಕರೆಯುತ್ತಾರೆ. ಒಳ ಲೆನ್ಸನ್ನು ಕೃತಕವಾಗಿ ತಯಾರಿಸಲಾಗಿದ್ದು ಅದು ಅಕ್ರಿಲಿಕ್ ಅಥವಾ ಸಿಲಿಕಾನ್ ಪದಾರ್ಥವಾಗಿದ್ದು ಅನೇಕ ಕಾಲ ಬಾಳಿಕೆ ಬರುತ್ತದೆ. ಯಾವ ಲೆನ್ಸ್ ಕಣ್ಣಿನ ಒಳಗೆ ಅಳವಡಿಸಲಾಗುವುದೋ ಅದು ನಿಮ್ಮ ಜೀವನದುದ್ದಕ್ಕೂ ಬಾಳಿಕೆ ಬರುತ್ತದೆ. ಆದುದರಿಂದ, ನಿಮ್ಮ ಲೆನ್ಸ್ನ ಬಳಕೆಯ ಜವಾಬ್ದಾರಿಯನ್ನು ನೀವೇ ವಹಿಸಿಕೊಂಡು ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಮುನ್ನ ಅತ್ಯುತ್ತಮ ರೀತಿಯ ಲೆನ್ಸನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಅನೇಕ ರೀತಿಯ ಒಳಲೆನ್ಸನ್ನು ನಾವು ಕಾಣಬಹುದು, ಇದರಲ್ಲಿ ಒಂದನ್ನು ಆರಿಸಿಕೊಳ್ಳಬಹುದು.

ಮೊನೋಫೋಕಲ್: ಇದು ಒಂದು ರೀತಿಯ ಪ್ರಮಾಣಿತ ಲೆನ್ಸ್ ಆಗಿದ್ದು, ಇದು ನೋಡಲು ಪಾರದರ್ಶಕವಾಗಿದ್ದು, ಒಂದೇ ತರಹದ ದೃಷ್ಟಿಯನ್ನು ಒಂದು ಕಡೆಗೆ ಮಾತ್ರ ನೀಡುತ್ತದೆ. (ದೂರ, ಮಧ್ಯಂತರ, ಹತ್ತಿರ) ಇದರ ಜೊತೆಯಲ್ಲಿ ನೀವು ಕನ್ನಡಕ ಬಳಸಬೇಕಾಗುತ್ತದೆ.

ಟೋರಿಕ್ : ನಿಮಗೆ ಅಸಮವಾದತೆ (ಅಸ್ಟಿಗ್ಮ್ಯಾಟಿಸಮ್) ಇದ್ದಲ್ಲಿ, ಈ ರೀತಿಯ ಲೆನ್ಸ್ ಅಳವಡಿಕೆಯಿಂದ ಮಬ್ಬಾದ ದೃಷ್ಟಿಯು ತಕ್ಕಮಟ್ಟಿಗೆ ಸುಧಾರಣೆ ಹೊಂದುತ್ತದೆ. ಮೊನೋಫೋಕಲ್ ಒಳಲೆನ್ಸ್‌ನ ರೀತಿಯೇ ಒಂದು ಅಳತೆಗೆ ಮಾತ್ರ ಸರಿ ಹೊಂದುತ್ತದೆ.
ಟೋರಿಕ್ ಒಳ ಲೆನ್ಸ್ ನ್ನು ಸುಮಾರು ಅಥಾವ ಅತಿಯಾದ ಪಾರದರ್ಶಕ ಪಟಲದ ಅಸಮವಾದತೆ (ಕೊರ್ನಿಯಲ್ ಅಸ್ಟಿಗ್ಮ್ಯಾಟಿಸಮ್) ಇರುವವರಿಗೆ ಮಾತ್ರ ಬಳಸಲು ಸಲಹೆ ನೀಡಲಾಗುತ್ತದೆ.

ಮಲ್ಟಿಫೋಕಲ್ ಲೆನ್ಸ್: ಮಲ್ಟಿಫೋಕಲ್ ಲೆನ್ಸ್‌ಗಳು ಬೆಳಕನ್ನು ಬೇಧಿಸಿ ದೂರದ ಮತ್ತು ಹತ್ತಿರದ ದೃಷ್ಟಿಗಳೆರಡನ್ನು ಸರಿ ಹೊಂದಿಸುತ್ತದೆ. ಇದು ಬೈಫೋಕಲ್ (ದೂರ ಮತ್ತು ಹತ್ತಿರ)  ಅಥವಾ ಆತ್ಯಾಧುನಿಕವಾದ ಟ್ರೈಫೋಕಲ್ (ದೂರ, ಮದ್ಯಂತರ, ಹತ್ತಿರ) ತರಹದ್ದು ಆಗಿದೆ. ಕನ್ನಡಕದ ಮೇಲೆ ಅವಲಂಬಿತವಾಗುವುದು ಈ ತರಹದ ಲೆನ್ಸ್‌ನ ಬಳಕೆಯಿಂದ ಕಡಿಮೆಯಾಗುತ್ತದೆ.

ನಿಮಗೆ ಸರಿಹೊಂದುವ ಒಳಲೆನ್ಸನ್ನು ಆಯ್ಕೆ ಮಾಡಲು ನೀವು ದಿನ ನಿತ್ಯದಲ್ಲಿ ಮಾಡುವ ಕೆಲಸ ಮತ್ತು ನಿಮ್ಮ ದೃಷ್ಟಿ ಯಾವ ರೀತಿಯದ್ದು, ಹತ್ತಿರದ ಅಥವಾ ದೂರದ ಹೊಂದಾಣಿಕೆ ಬೇಕಾಗಬಹುದು ಎಂದು ನಿರ್ಧರಿಸಬೇಕಾಗುತ್ತದೆ. ದಿನದ ಅಂದರೆ ಹಗಲಿನಲ್ಲಿ ನೀವು ಮಾಡುವ ಕೆಲಸದ ಬಗ್ಗೆ ವೇಳಾಪಟ್ಟಿ ಮಾಡಿಕೊಂಡು, ಯಾವ ರೀತಿಯ ದೃಷ್ಟಿ ನಿಮಗೆ ಈ ಕೆಲಸವನ್ನು ಮುಗಿಸಲು ಬೇಕಾಗುತ್ತದೆ ಎಂದು ತಿಳಿದು, ನೀವು ನಿಮ್ಮ ಕನ್ನಡಕವನ್ನು ಎಷ್ಟು ಸಲ ಬಳಸುತ್ತೀರಿ ಎಂಬುದನ್ನು ತಿಳಿಯಬೇಕಾಗುತ್ತದೆ. ಇದರಿಂದ ನೀವು ನಿಮ್ಮ ಯಾವ ರೀತಿಯ ಒಳಲೆನ್ಸನ್ನು ಬಳಸಲು ಮತ್ತು ಅದು ನಿಮಗೆ ದೈನಂದಿಕ ಕೆಲಸಗಳಿಗೆ ಎಷ್ಟರ ಮಟ್ಟಿಗೆ ಸಹಾಯವಾಗುತ್ತದೆ ಎಂದು ತಿಳಿಯುತ್ತದೆ.

ಬೇರೆ ಇನ್ನಿತರೆ ತಿಳಿದುಕೊಳ್ಳಬೇಕಾಗುವ ಅಂಶಗಳೆಂದರೇ ನಿಮಗೆ ಸಹಜವಾದ ತೊಂದರೆಗಳಾದ ಅಸ್ಟಿಗ್ಮ್ಯಾಟಿಸಮ್, ಗ್ಲೂಕೋಮ, ಮ್ಯಾಕ್ಯುಲರ್ ಡಿಜೆನರೆಷನ್, ಪಾರದರ್ಶಕ ಪಟಲದ ಕಾಯಿಲೆಗಳು ಅಥವಾ ಇನ್ನಿತರೆ ತೊಂದರೆಗಳು ಇದ್ದಲ್ಲಿ, ಅದಕ್ಕೆ ತಕ್ಕನಾದ ಲೆನ್ಸ್‌ಗಳು ಅಳವಡಿಕೆ ಮುಕ್ಯವಾಗುತ್ತದೆ. ಯಾಕೆಂದರೆ ಅದು ಪೊರೆಯನ್ನು ಮತ್ತು ನಿಮಗಿರುವ ಇತರೆ ಸ್ಥಿತಿಯನ್ನು ಹೋಗಲಾಡಿಸಬೇಕಾಗುತ್ತದೆ. ನೀವು ನಿಮ್ಮ ತಜ್ಞರೊಂದಿಗೆ ಚರ್ಚಿಸಿ ನಂತರ ಮುಂದುವರಿಯುವುದು ಒಳ್ಳೆಯದು.

ಹೊರಗಡೆ ಬಳಸುವ ಲೆನ್ಸ್‌ನ ರೀತಿಯೇ ಕಣ್ಣಿನ ಒಳಲೆನ್ಸ್‌ನಲ್ಲೂ ಅನೇಕ ವ್ಯತ್ಯಾಸವಿರುವ ತಿದ್ದುಪಡಿ ಲೆನ್ಸ್‌ಗಳು ಇರುತ್ತವೆ. ಕಣ್ಣಿನ ಒಳಗೆ ಹಾಕುವ ತಿದ್ದುಪಡಿ ಲೆನ್ಸ್ ನ್ನು ಸ್ವತಃ ವೈದ್ಯರೇ ಹಲವು ತಪಾಸಣೆಯ ಮೂಲಕ ತಿಳಿದುಕೊಳ್ಳುತ್ತಾರೆ.

ಶಸ್ತ್ರ ಚಿಕಿತ್ಸೆಗೆ ಮುನ್ನ, ಒಂದು ಅಥವಾ ಎರಡು ವಾರದ ಮೊದಲು ಪರೀಕ್ಷಿಸಿ ತಿಳಿದುಕೊಳ್ಳುತ್ತಾರೆ. ನಿಮ್ಮನ್ನು ಪರಿಕ್ಶಿಸಿದ ವೈದೈರೇ ನಿಮ್ಮ ದೈನಂದಿನ ಚಟುವಟಿಕೆಯನ್ನು ತಿಳಿದು, ನಿಮ್ಮ ಕಣ್ಣಿನ ಆಕಾರದ ಮೇರೆಗೆ, ಕಣ್ಣಿನ ಅಳತೆ, ಆಕಾರವನ್ನು ಗಣನೆಗೆ ತೆಗೆದುಕೊಂಡು ಅವರೇ ಯಾವ ರೀತಿಯ ಒಳಲೆನ್ಸ್ ನ್ನು ಬಳಸಿದರೆ ನಿಮಗೆ ಅತ್ಯುತ್ತಮ ಶೈಲಿಯ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂಬುದನ್ನು ಸೂಚಿಸುತ್ತಾರೆ.

Book an Appointment
Call Us