ಲೇಸರ್ ನೆರವಿನ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಎಂದರೇನು?

ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ
ನಾನೇಕೆ ನಾರಾಯಣ ನೇತ್ರಾಲಯವನ್ನು ಆಯ್ಕೆ ಮಾಡಬೇಕು?

ನಾರಾಯಣ ನೇತ್ರಾಲಯವು ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡುವುದರಲ್ಲಿ ಸತತ ೩೫ ವರ್ಷಗಳ ಅನುಭವಗಳಿಸಿರುವ ಆಸ್ಪತ್ರೆ ಅಷ್ಟೇ ಅಲ್ಲದೆ ೨,೭೫,೦೦೦ದಷ್ಟು ಸಂತೃಪ್ತ ರೋಗಿಗಳ ಯಶಸ್ವಿ ಶಸ್ತ್ರಚಿಕಿತ್ಸೆಯ ದಾಖಲೆಯನ್ನು ತನ್ನದಾಗಿಸಿ ಕೊಂಡಿದೆ. ನಮ್ಮಲ್ಲಿ ಫೆಮ್ಟೋಸೆಕೆಂಡ್ ಲೇಸರ್ ನೆರವಿನ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ನಿಖರ ರೊಬೋಟಿಕ್ ತಂತ್ರಜ್ಞಾನದ ಮುಖೇನ ಮಾಡುವುದರ ಮೂಲಕ ದೃಷ್ಟಿ ಸುಧಾರಣೆ ಮತ್ತು ರೋಗಿಗಳ ಸುರಕ್ಷತೆಯನ್ನು ಖಚಿತಗೊಳಿಸಲಾಗುತ್ತದೆ. ಧೀರ್ಘವಾದ ಪೂರ್ವ ಶಸ್ತ್ರ ಚಿಕಿತ್ಸೆಯ ಮೌಲ್ಯಮಾಪನ, ನುರಿತ ರೋಗ ಶೋಧನಾ ಉಪಕರಣಗಳು, ಅತ್ಯಾಧುನಿಕ ಆವಿಷ್ಕಾರಗಳಿಂದಾದ ಶಸ್ತ್ರಚಿಕಿತ್ಸಾ ಕೊಠಡಿ, ವಿಶ್ವ ಪ್ರಸಿದ್ಧ ಶಸ್ತ್ರ ತಜ್ಞರು ಮತ್ತು ಅತಿ ನಿಖರವಾದ ಶಸ್ತ್ರ ಚಿಕಿತ್ಸಾ ನಂತರದ ಆರೈಕೆ ಇವೆಲ್ಲವೂ ನಾರಾಯಣ ನೇತ್ರಾಲಯವನ್ನು ಆಯ್ಕೆ ಮಾಡಲು ಸೂಕ್ತ ಕಾರಣಗಳಾಗಿವೆ.

ಲೇಸರ್ ನೆರವಿನ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಎಂದರೇನು?

ನಿಮ್ಮ ಕಣ್ಣಿನೊಳಗಿನ ನಿರಂತರ ಮೋಡ ಕವಿದಂತಾದ ಮಸೂರವನ್ನು ಹೆಚ್ಚಿನ ಆವರ್ತನದ ಅಲ್ಟ್ರಾಸೌಂಡ್ ಸಾಧನದ ಉಪಯೋಗದಿಂದ ಸಣ್ಣ ಸಣ್ಣ ತುಂಡುಗಳಾಗಿಸಿ ತದನಂತರ ಕಣ್ಣಿನೊಳಗಿನ ತುಂಡುಗಳನ್ನು ಸೂಕ್ತ ವಿಧಾನದಲ್ಲಿ ನಿಧಾನವಾಗಿ ಹೊರತೆಗೆದು ಸ್ಪಷ್ಟವಾದ ದೃಷ್ಟಿಯನ್ನು ಪಡೆಯುವುದರ ಸಲುವಾಗಿ ಕೃತಕ ಮಸೂರವನ್ನು ಅಳವಡಿಸಲಾಗುತ್ತದೆ.

ಕಣ್ಣಿನೊಳಕ್ಕೆ ಅಳವಡಿಸಲಾಗುವ ಇಂಟ್ರೋಕುಲರ್ ಲೆನ್ಸ್ ಅಥವಾ ಎಲ್ ಎಂದರೇನು?

ಸಿಲಿಕಾನ್, ಅಕ್ರಿಲಿಕ್, ಪ್ಲಾಸ್ಟಿಕ್ ಮುಂತಾದ ಸಂಶ್ಲೀಶಿತ ವಸ್ತುಗಳಿಂದ ತಯಾರಿಸಲಾಗುವ ದೃಷ್ಟಿ ಸಹಾಯಕ ಮಸೂರ ಅಥವಾ ಕೃತಕ ಮಸೂರವನ್ನೇ  ಐ ಓ ಎಲ್ ಅಥವಾ ಇಂಟ್ರೋಕುಲರ್ ಲೆನ್ಸ್ ಎಂದು ಕರೆಯಲಾಗುತ್ತದೆ. ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ಈ ಕೃತಕ ಮಸೂರವನ್ನು ನೈಸರ್ಗೀಕ ಮಸೂರದ ಪ್ರತಿಯಾಗಿ ಅಳವಡಿಸಲಾಗುತ್ತದೆ. ಕಾಂಟ್ಯಾಕ್ಟ್ ಲೆನ್ಸ್ನ ಹಾಗೇಯೇ ಈ ಕೃತಕ ಮಸೂರವು ಸಹ ವಿವಿಧ ಪವರ್ ಗಳಲ್ಲಿ ಲಭ್ಯ. ಶಸ್ತ್ರ ಚಿಕಿತ್ಸೆಯ ಮುನ್ನ ವೈದ್ಯರು ಮಾಡುವ ಪರೀಕ್ಷೆ ಹಾಗು ತೆಗೆಯುವ ಮಸೂರದ ಅಳತೆಯ ಅವಲಂಬಿಸಿ ಐ ಓ ಎಲ್-ನ ಪವರನ್ನು ಸಹ ನಿರ್ಧರಿಸಲಾಗುತ್ತದೆ.

ಇಂಟ್ರಾಕುಲರ್ ಲೆನ್ಸ್ಗಳಲ್ಲಿ ಪ್ರಮುಖವಾದದ್ದು ಯಾವುದು?
ನಿಮ್ಮ ಕಣ್ಣಿನ ಪೊರೆಯ ಶಸ್ತ್ರಜ್ಞರು ನಿಮಗೆ ಸೂಕ್ತವಾದ ಇಂಟ್ರಾಕುಲರ್ ಲೆನ್ಸ್ನನ್ನು ಆಯ್ಕೆ ಮಾಡಲು ನೆರವಾಗುವರು. ಇದು ನಿಮ್ಮ ದೈನಂದಿನ ಚಟುವಟಿಕೆಗಳು, ನಿಮಗಿರುವ ದೃಷ್ಟಿಯ ಪ್ರಕಾರ, ದೂರ ದೃಷ್ಟಿಯ ಅಥವಾ ಸಮೀಪ ಧೃಷ್ಟಿಯಾ ಎಂಬುದರ ಮೇಲೇ ಅವಲಂಬಿತವಾಗುತ್ತದೆ. ಇನ್ನೂ ಪರಿಗಣಿಸಬೇಕಾದ ವಿಚಾರಗಳೆಂದರೆ, ಆಸ್ಟಿಗ್ಮಾಟಿಸಂ, ಗ್ಲುಕೋಮಾ, ಹಾಗು ಪ್ರತ್ಯೇಕ ಮಸೂರಗಳ ಅವಶ್ಯಕತೆ ಇರುವ ಇತರೆ ಪರಿಸ್ಥಿತಿಗಳು.

ನನ್ನ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಆದ ಎಷ್ಟು ಸಮಯದ ನಂತರ ಮನೆಗೆ ತೆರಳಬಹುದು?

ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ನಿಮಗೆ ನೀಡಲಾದ ಸಾಮಾನ್ಯ ಅರಿವಳಿಕೆ (ಅನೆಸ್ಥೆಸಿಯಾ ) ಪರಿಣಾಮಗಳಿಂದ ನೀವು ಚೇತರಿಸಿಕೊಳ್ಳುವ ವರೆಗೂ ನೀವು ಆಸ್ಪತ್ರೆಯಲ್ಲೇ ಇರಬೇಕು. ಸಾಮಾನ್ಯವಾಗಿ ಇದಕ್ಕೆ ೩೦ ನಿಮಿಷದಷ್ಟು ಸಮಯವಾಗುತ್ತದೆ. ಶಸ್ತ್ರ ಚಿಕಿತ್ಸಾ ನಂತರದ ಸೂಕ್ತ ಸಲಹೆಗಳನ್ನು ಸಮಾಲೋಚನೆ ವಿಭಾಗದಲ್ಲಿ ನೀಡಿದ ನಂತರ  ನೀವು ಮನೆಗೆ ತೆರಳಬಹುದು.

ಕಣ್ಣಿನ  ಪೊರೆಯ ಶಸ್ತ್ರ ಚಿಕಿತ್ಸೆಯ ದಿನದವರೆಗೂ ನಾನು ನನ್ನ ಕಾಂಟಾಕ್ಟ್ ಲೆನ್ಸನ್ನು ಧರಿಸಬಹುದೇ?

ಕಾಂಟಾಕ್ಟ್ ಲೆನ್ಸ್ ಧರಿಸುವುದರಿಂದ ಕಾರ್ನಿಯಾದ ಮೇಲ್ಮೈನ ಆಕಾರದಲ್ಲಿ ಬದಲಾವಣೆ ಉಂಟಾಗಿ, ಶಸ್ತ್ರ ಚಿಕಿತ್ಸೆಯ ಮುನ್ನಾ ಪರೀಕ್ಷಿಸಲಾಗುವ ಕಾರ್ನಿಯಾದ ಅಳತೆಯಲ್ಲಿ ಬದಲಾವಣೆ ತರಬಹುದು. ಈ ಕಾರಣದಿಂದ ನಿಮಗೆ ಸೂಕ್ತವಾಗುವ ಕೃತಕ ಮಸೂರವನ್ನು ಪತ್ತೆ ಹಚ್ಚುವಲ್ಲಿ ಏರುಪೇರಾಗಬಹುದು. ನೀವು ಧರಿಸುವಂತಹ ಕಾಂಟಾಕ್ಟ್ ಲೆನ್ಸಿನ  ಬಳಸುವಿಕೆಯನ್ನು ಒಂದರಿಂದ ನಾಲ್ಕು ವಾರಗಳ ಮುಂಚಿತವಾಗಿಯೇ ನಿಲ್ಲಿಸಬೇಕು. ಶಸ್ತ್ರ ಚಿಕಿತ್ಸಾ ಸಂದರ್ಭದ ವರೆಗೂ ನೀವು ಕಾಂಟ್ಯಾಕ್ಟ್ ಲೆನ್ಸನ್ನು ಬಳಸುವುದರಿಂದ ಕಾರ್ನಿಯಾದ ಮೇಲ್ಮೈ ಸಹಜ ಸ್ಥಿತಿಗೆ ಹಿಂತಿರುಗದೆ, ಕಾರ್ನಿಯಾದ ಅಳತೆಯಲ್ಲಿ ಏರುಪೇರುಗಳಾಗಿ, ಶಸ್ತ್ರ ಚಿಕಿತ್ಸೆಯ ನಂತರ ದೃಷ್ಟಿಯಲ್ಲಿ ಹಾನಿ ಉಂಟುಮಾಡುವುದು.

ಲಾಸಿಕ್  ವಕ್ರೀಕಾರಕ ಶಸ್ತ್ರ ಚಿಕಿತ್ಸೆ ಆದ ತರುವಾಯ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಳ್ಳ ಬಹುದೇ?

ಹೌದು! ಕಾರ್ನಿಯಾದ ಆಕಾರವನ್ನು ಮರುರೂಪು ಗೊಳಿಸಿ ಸ್ಪಷ್ಟ ದೃಷ್ಟಿಯನ್ನು  ನೀಡುವಂತಹ ಲಾಸಿಕ್ ಅಥವಾ ವಕ್ರೀಕಾರಕ ಶಸ್ತ್ರಚಿಕಿತ್ಸೆಯ ನಂತರವೂ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು. ಆದಾಗ್ಯೂ ಕಾರ್ನಿಯಾದ ಆಕಾರದಲ್ಲಿ ಶಸ್ತ್ರಚಿಕಿತ್ಸೆಯಿಂದ ಉಂಟಾಗಿರುವ ಗಣನೀಯ ಬದಲಾವಣೆಯಿಂದ, ಸೂಕ್ತ ಲೆನ್ಸ್ ಪವರನ್ನು ತೀರ್ಮಾನಿಸುವುದರ ಸಲುವಾಗಿ ಹೆಚ್ಚುವರಿ ಲೆಕ್ಕಾಚಾರಗಳ ಅಗತ್ಯವಿರುತ್ತದೆ. ವಕ್ರೀಕಾರಕ ಶಸ್ತ್ರ ಚಿಕಿತ್ಸೆಯ ಮುನ್ನಾ ಹಾಗು ನಂತರದ ದಾಖಲೆಗಳು, ಕಣ್ಣಿನ ಪೊರೆಯ ಶಸ್ತ್ರಜ್ಞರಿಗೆ ಐ ಓ ಎಲ್ ನ್ನು ಆಯ್ಕೆ ಮಾಡುವುದರಲ್ಲೂ ದೃಷ್ಟಿ ಫಲಿತಾಂಶವನ್ನು ತಂದು ಕೊಡುವುದರಲ್ಲೂ ನೆರವಾಗುತ್ತದೆ.

ಸತ್ಯ ಅಥವಾ ಮಿಥ್ಯ:

ಮಿಥ್ಯ : ಕಣ್ಣಿನ ಪೊರೆಯನ್ನು ಯಾವುದೇ ಚಿಕಿತ್ಸೆ ಇಲ್ಲದೆ ಸರಿ ಪಡಿಸ ಬಹುದು

ಸತ್ಯ : ಕಣ್ಣಿನ ಪೊರೆಯನ್ನು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣಪಡಿಸಲು ಸಾದ್ಯವಿಲ್ಲ. ವಯಸ್ಸಾದಂತೆ ಕಣ್ಣಿನ ಮಸೂರದಲ್ಲಿ ಕ್ರಮೇಣವಾಗಿ ಸಂಗ್ರಹಣೆ ಆಗಿರುವಂತಹ ಪ್ರೋಟೀನ್ನ ಕಾರಣದಿಂದ ಕಣ್ಣಿನ ಪೊರೆ ಉಂಟಾಗುತ್ತದೆ. ಸದ್ಯಕ್ಕೆ ಶಸ್ತ್ರ ಚಿಕಿತ್ಸೆಯನ್ನು ಬಿಟ್ಟರೆ ಪೊರೆಯನ್ನು ಕರಗಿಸುವ ಅಥವಾ ನೀಗಿಸುವಂತಹ ಯಾವುದೇ ಡ್ರಾಪ್ಸ್ ಅಥವಾ ಔಷದಿ ದೊರೆಯುವುದಿಲ್ಲ ಹಾಗೂ ಪೊರೆಯನ್ನು ತೆಗೆದು ಕೃತಕ ಲೆನ್ಸ್ ಅನ್ನು ಅಳವಡಿಸಲಾಗುತ್ತದೆ.

ಸತ್ಯ ಅಥವಾ ಮಿಥ್ಯ:

ಮಿಥ್ಯ: ಕಣ್ಣಿನ ಹನಿಗಳಿಂದ ಪೊರೆಯನ್ನು ಸರಿಪಡಿಸಬಹುದಾಗಿದೆ.

ಸತ್ಯ : ಶಸ್ತ್ರಚಿಕಿತ್ಸೆಯ ವಿನಹ ಬೇರೆ ತೆರನಾದ ಯಾವುದೇ ಚಿಕಿತ್ಸೆ ಇದಕ್ಕೆ ಇರುವುದಿಲ್ಲ

 

Book an Appointment
Call Us